Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಬ್ಬ ಸಚಿವ ನಿದ್ದೆ ಮಾಡಿದರೆ, ಇನ್ನೊಬ್ಬ ಸಂಸದ ದೋಸೆ ತಿನ್ನುತ್ತಿದ್ದಾನೆ.. ಇದನ್ನು ಕಾಂಗ್ರೆಸ್ ಹೇಳಿತ್ತೆ : ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

Facebook
Twitter
Telegram
WhatsApp

 

ಬೆಂಗಳೂರು: ಮಳೆಯಿಂದಾಗಿ ಬೆಂಗಳೂರಿನ ವರ್ತೂರು, ಬಿಟಿಎಂ ಲೇಔಟಗ ಕಡೆಯೆಲ್ಲಾ ಸಮುದ್ರದಂತಾಗಿದೆ. ಈ ಅವಾಂತರಕ್ಕೆ ಕಾಂಗ್ರೆಸ್ ಮಾಡಿದ ರಾಜಕಾಲುವೆ ಒತ್ತುವರಿಯೇ ಕಾರಣ ಎಂದು ಸಿಎಂ ಹೇಳಿದ್ದರು. ಅವರ ಹೇಳಿಕೆಗೆ ಕಾಂಗ್ರೆಸ್ ಟ್ವೀಟ್ ಮಾಡಿ ಹರಿಹಾಯ್ದಿದೆ.

ಸಿಎಂ ಬೊಮ್ಮಾಯಿ ಅವರೆ ಕಳೆದ ವರ್ಷವೇ ರಾಜಕಾಲುವೆ ಅಭಿವೃದಿಗಾಗಿ ₹1500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು ₹400 ಕೋಟಿ ಮಾತ್ರ. ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ. ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ ₹1100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ?.

ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು ‘ಕುಣಿಲಾರದವರು ನೆಲ ಡೊಂಕು’ ಎನ್ನುವಂತಿದೆ. ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದ್ದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50% ಕಮಿಷನ್ ದಾಹ ಅಲ್ಲವೇ.

ಬೊಮ್ಮಾಯಿ ಅವರೇ, ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಿ. ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ. ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ. ಇನ್ನುಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ. ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ? ಎಂದು ಸರಣಿ ಟ್ವೀಟ್ ಮಾಡಿದೆ ಕಾಂಗ್ರೆಸ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

ಶಾಸಕ ಮುನಿರತ್ನ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ : ಎಸ್.ಜಯಣ್ಣ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಗುತ್ತಿಗೆದಾರನನ್ನು ಮನೆಗೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬೆಂಗಳೂರು ರಾಜರಾಜೇಶ್ವರಿ

error: Content is protected !!