Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದರಾಮಯ್ಯಗೆ ‘ಕಲೆಕ್ಷನ್ ಮಾಸ್ಟರ್’ ಎಂದಿದ್ದ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು..!

Facebook
Twitter
Telegram
WhatsApp

ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಎಡಿಟ್ ಮಾಡುವ ಮೂಲಕ ಕಲೆಕ್ಷನ್ ಮಾಸ್ಟರ್ ಎಂದು ಪೋಸ್ಟ್ ಹಾಕಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಚೀಫ್‌ ಮಿನಿಸ್ಟರ್ ಎಂಬ ಪೋಸ್ಟರ್ ಅನ್ನು, ಕಲೆಕ್ಷನ್ ಮಿನಿಸ್ಟರ್ ಎಂದು ಪೋಸ್ಟ್ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹರಿದು ಬಿಟ್ಟಿದ್ದರು.

ಈ ಸಂಬಂಧ ಬೆಳ್ತಂಗಡಿಯ ಕಾಂಗ್ರೆಸ್‌ ಮುಖಂಡ ಶೇಕರ್ ಕುಕ್ಕೇಡಿ ದೂರು ನೀಡಿದ್ದರು. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ರಾಜ್ಯದ ಮುಖ್ಯಮಂತ್ರಿಯನ್ನು ಅವಮಾನ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ರೇಕಿಸಿ, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಶಾಂತಿ ಕೆಡಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಕ್ಕೇಡಿ ದೂರಿನಲ್ಲಿ ತಿಳಿಸಿದ್ದಾರೆ.

 

ಸಿಎಂ ಕಚೇರಿ, ಗೃಹ ಕಚೇರಿ ಮತ್ತು ಸಿಎಂ ನಿವಾಸದ ಗೇಟ್ ಗೆ ಕಲೆಕ್ಷನ್ ಬೋರ್ಡ್ ಅಂಟಿಸಿರುವಂತೆ, ಫೋಟೋ ಎಡಿಟ್ ಮಾಡು ಹಾಕಲಾಗಿದೆ. ಈ ಫೋಟೋಗಳನ್ನು ಹರೀಶ್ ಪೂಂಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹಂಚಿಕೊಂಡಿದ್ದಾರೆ. ಇದೀಗ ದೂರು ದಾಖಲಾಗಿದ್ದು, ಅವರ ಮೇಲೆ ದಾಖಲಾದ ಎರಡನೇಯ ಎಫ್ಐಆರ್ ಆಗಿದೆ. ಇತ್ತಿಚೆಗೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ, ತೆರವು ಜಟಾಪಟಿಯ ವಿಚಾರವಾಗಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂಡಾ ಅಕ್ರಮ : ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಏನಂದ್ರು..?

ಬೆಂಗಳೂರು: ಮೂಡಾದಿಂದ ಹದಿನೈದು ಸೈಟುಗಳು ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರ ಹೆಸರಲ್ಲಿ ಇದೆ ಎಂಬುದು ತಿಳಿದ ಮೇಲೆ ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ

ಯುವ-ಶ್ರೀದೇವಿ ಅರ್ಜಿ ವಿಚಾರಣೆ : ಡಿವೋರ್ಸ್ ಸಿಕ್ತಾ..? ಏನಾಯ್ತು ಕೇಸ್..?

ಬೆಂಗಳೂರು: ದೊಡ್ಮನೆ ಕುಡಿ ಯುವ ರಾಜ್‍ಕುಮಾರ್ ಹಾಗೂ ಸೊಸೆ ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ಕೇಸ್ ಅರ್ಜಿ ಇಂದು ವಿಚಾರಣೆಗೆ ಬಂದಿದೆ. ಫ್ಯಾಮಿಲಿ ಕೋರ್ಟ್ ಗೆ ಇಂದು ಇಬ್ಬರು ಹಾಜರಾಗಿದ್ದರು. ಅರ್ಜಿ ವಿಚಾರಣೆ ನಡೆಸಿದ

ದರ್ಶನ್ ನ್ಯಾಯಾಂಗ ಬಂಧನ ಇಂದು ಅಂತ್ಯ : ದಾಸನ ಪರ ವಕೀಲರ್ಯಾಕೆ ಇನ್ನು ಜಾಮೀನು ಅರ್ಜಿ ಸಲ್ಲಿಸಿಲ್ಲ..?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್ ಅವರ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಲಿದೆ. ಹೀಗಾಗಿ ಪೊಲೀಸರು ಇಂದು ಮತ್ತೊಮ್ಮೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ನ್ಯಾಯಾಧೀಸರ ಎದುರು ಹಾಜರು ಪಡಿಸಲಿದ್ದಾರೆ. ವಿಡಿಯೋ

error: Content is protected !!