ಬೆಂಗಳೂರು : ಕಾರ್ತಿಕ ಮಾಸದ ಕಡೆಯ ಸೋಮವಾರ ಬಂತು ಅಂದ್ರೆ ಬೆಂಗಳೂರು ಮಂದಿಗೆ ಖುಷಿಯೋ ಖುಷಿ. ಕಡಲೆಕಾಯಿ ಪರಿಷೆ ಜಾತ್ರೆಯಲ್ಲಿ ಮಿಂದೆದ್ದು, ದೇವರಿಗೆ ಕಡಲೇಕಾಯಿಯಲ್ಲೇ ಅಲಂಕಾರ ಮಾಡೋದನ್ನ ನೋಡೋದೆ ಚೆಂದ. ಆದ್ರೆ ಕೊರೋನಾದಿಂದಾಗಿ ಈ ಎಲ್ಲಾ ಸಂಭ್ರಮಕ್ಕೂ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಆ ಆಚರಣೆಗೆ ಕಳೆ ಬಂದಂತಾಗಿದೆ.
ಪಾರಂಪರಿಕ ಕಡಲೇಕಾಯಿ ಪರಿಷೆ ಜಾತ್ರೆಗ ಅಗತ್ಯ ಕ್ರಮ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ತಿಳಿಸಿದ್ದಾರೆ. ಜಾತ್ರೆಗೂ ಅನುಮತಿ ನೀಡಿದ್ದಾರೆ.
ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾಡಿನ ಸಂಸ್ಕೃತಿ ಬಿಂಬಿಸುವ ನವೆಂಬರ್ 29 ರಂದು ನಡೆಯಲಿರುವ ಕಡಲೇಕಾಯಿ ಪರಿಷೆಯನ್ನು ಸಂಪ್ರದಾಯ, ಸಂಸ್ಕ್ರತಿ ಮತ್ತು ಜಾನಪದ ವೈಭವದಿಂದ ಆಚರಿಸಲಾಗುವುದು. ಅಧಿಕ ಜನರು ಭೇಟಿ ನೀಡುವುದರಿಂದ ಮೂಲಭೂತ ಸೌಕರ್ಯ, ರಕ್ಷಣೆಗಾಗಿ ಪೊಲೀಸ್ ಮತ್ತು ಬಿಬಿಎಂಪಿಯ 700 ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.