ಬೆಂಗಳೂರು: ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಸಬೇಕೆಂದು ಶ್ರೀರಾಮಸೇನೆ ಸರ್ಕಾರಕ್ಕೇ ಗಡುವು ನೀಡಿತ್ತು. ಸರ್ಕಾರ ಮುತಾಲಿಕ್ ಅವರ ಮಾತನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಇಂದು ರೊಚ್ಚಿಗೆದ್ದ ಮುತಾಲಿಕ್ ಆಜಾನ್ ವಿರುದ್ಧ ಸುಒ್ರಭಾತ ಘೋಷಣೆ ಮೊಳಗಿಸಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ಇಂದು ಸುಪ್ರಭಾತ ಮೊಳಗಿತ್ತು.
ಇಂದಿನ ಬೆಳವಣಿಗೆ ಕಂಡು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪೊಲೀಸರೊಟ್ಟಿಗೆ ದಿಢೀರ್ ಸಭೆ ನಡೆಸಿ, ಈ ಸಂಬಂಧ ಚರ್ಚೆ ನಡೆಸಿದ್ದರು. ಬಳಿಕ ಮಾತನಾಡಿದ ಅವರು, 15 ದಿನಗಳ ಬಳಿಕ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗುತ್ತೆ ಎಂದಿದ್ದಾರೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಯಾವ ಸಮಯದಲ್ಲಿ ಬಳಸಬೇಕು ಎಂಬುದನ್ನು ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ತೆರವುಗೊಳಿಸಲಾಗುತ್ತದೆ. ಬೆಳಗ್ಗೆ ಸಮಯದಲ್ಲಿ ಒಂದು ಡೆಸಿಬಲ್, ರಾತ್ರಿ ಸಮಯದಲ್ಲಿ ಒಂದು ಡೆಸಿಬಲ್ ನಲ್ಲಿ ಧ್ವನಿವರ್ಧಕ ಬಳಸಬೇಕಾಗುತ್ತದೆ. ಇದು ಹಿಂದೂ ಧಾರ್ಮಿಕ ಮತ್ತು ಮುಸ್ಲಿಂ ಧಾರ್ಮಿಕ ಅಂತ ಅನ್ವಯಿಸುವುದಿಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲೂ ಧ್ವನಿವರ್ಧಕ ಬಳಕೆ ಮಾಡುವಾಗ ಅನ್ವಯವಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪೊಲೀಸ್ ಅಧಿಕಾರಗಳ ಜೊತೆ ನಡೆದ ಸಭೆ ಬಳಿಕ ತಿಳಿಸಿದ್ದಾರೆ.