ಚಿತ್ರದುರ್ಗ. (ನ.13) : ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ವಿ.ಸಾಗರದಿಂದ ಹೊಳಲ್ಕೆರೆ ತಾಲ್ಲೂಕಿನ ಜನವಸತಿಗಳಿಗೆ ಬರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನಯಡಿ ಬರುವ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಪರಿಶೀಲನೆ ನಡೆಸಿದರು.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ವಿಧಾನದ ಮೂಲಕ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ 215 ಜನ ವಸತಿ ಮತ್ತು ಹೊಳಲ್ಕೆರೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಇದರ ಅಂದಾಜು ಮೊತ್ತ 367 ಕೋಟಿ ಈ ಕಾಮಗಾರಿಯನ್ನು ಮಂಗಳೂರಿನ ಅಮರ್ ಇನ್‍ಪ್ರಾ ಪ್ರಾಜೆಕ್ಟ್‍ಗೆ ವಹಿಸಿದ್ದು. ಈ ಕಾಮಗಾರಿಯಲ್ಲಿ 23 ಎಂ.ಎಲ್.ಡಿ ಶುದ್ಧ ಕುಡಿಯುವ ನೀರಿನ ಘಟಕ, 14- ಝಡ್. ಬಿ.ಟಿ, 2-ಎಂ.ಬಿ.ಟಿ ಹಾಗೂ 541 ಕಿ.ಮೀ ಪೈಪ್ ಲೈನ್ ಮಾರ್ಗ ಅಳವಡಿಕೆಗಳಿದ್ದು, ಈ ಕಾಮಗಾರಿಯಲ್ಲಿ ಶೇ.75 ರಷ್ಟು ಶುದ್ದ ಕುಡಿಯುವ ನೀರಿನ ಘಟಕ ಹಾಗೂ 480 ಕಿ.ಮೀ ಪೈಪ್ ಲೈನ್ ಮಾರ್ಗ ಅಳವಡಿಕೆಯ ಕಾಮಗಾರಿಯು ಪೂರ್ಣಗೊಂಡಿದೆ ಹಾಗೂ ವಾಣಿವಿಲಾಸ ಸಾಗರದಲ್ಲಿ ಜಾಕ್ವೆಲ್ ಕಾಮಗಾರಿಯ ಪಿಲ್ಲಿಂಗ್ ಮೆಥಡ್ ಕೆಲಸ ಪ್ರಗತಿಯಲಿದ್ದು, ಈ ಸಂಪೂರ್ಣ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಕಾರ್ಯ ಪಾಲಕ ಇಂಜಿನಿಯರ್ ಬಸಣ್ಣಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೀಲಕಂಠಪ್ಪ, ಎ.ಇ ಕೃಷ್ಣಮೂರ್ತಿ, ಜೆ.ಇ ಶಿವಕುಮಾರ ಹಾಗೂ ಅಮರ್ ಇನ್‍ಪ್ರಾ ಪ್ರಾಜೆಕ್ಟ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಸೆಲ್ವ ಶೇಖರ್ ಇದ್ದರು.