ಬೆಳಗಾವಿ: ಯಾವುದೇ ಎಲೆಕ್ಷನ್ ಬಂದ್ರೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಇದೀಗ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ದಿನಾಂಕ ಅನೌನ್ಸ್ ಆದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರುಗಳ ಪೈಪೋಟಿ ಶುರುವಾಗಿದೆ.
ಡಿಸೆಂಬರ್ 10 ರಂದು 25 ಸ್ಥಾನಗಳಿಗೆ ಕರ್ನಾಟಕ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಚುನಾವಣಾ ಬಿಸಿ ಶುರುವಾಗಿದೆ. ಜಿಲ್ಲೆಯಿಂದ ಕಾಂಗ್ರೆಸ್ ನ 7 ಸದಸ್ಯರ ಹೆಸರನ್ನ ಕೆಪಿಸಿಸಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲ ಈ ಲೀಸ್ಟ್ ನಲ್ಲಿರುವ ಪ್ರಕಾಶ್ ಹುಕ್ಕೇರಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿ ನನಗೆ ಟಿಕೇಟ್ ನೀಡಲೇಬೇಕೆಂದು ಮನವಿ ಮಾಡಿದ್ದಾರಂತೆ.
ಮಾಜಿ ಶಾಸಕ ವೀರಕುಮಾರ್ ಪಾಟೀಲ್, ಶಹಜಹಾನ್ ಡೊಂಗರಗಾಂವ್, ಡಾ. ಎನ್ ಎ ಮುಗದಮ್ಮ, ಸುನೀಲ್ ಹನಮಣ್ಣವರ, ಕಿರಣ ಸಾಧುನವರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜದ ಹಟ್ಟಿಹೊಳಿ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೆಸರನ್ನ ಸೂಚಿಸಲಾಗಿದೆ. ಆದ್ರೆ ಕಾಂಗ್ರೆಸ್ ನಾಯಕರು ಯಾರ ಹೆಸರನ್ನು ಫೈನಲ್ ಆಗುತ್ತೆ ಅಂತ ಕಾದು ನೋಡಬೇಕಿದೆ.