Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎನ್.ಇ.ಪಿ. ರದ್ದು : ಚಿತ್ರದುರ್ಗದಲ್ಲಿ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಆ.28) : ಎನ್.ಇ.ಪಿ.ಯನ್ನು ರದ್ದು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ರಾಜ್ಯ ಸರ್ಕಾರವನ್ನು ಈ ಪ್ರತಿಭಟನೆಯ ಮೂಲಕ ಆಗ್ರಹಿಸುತ್ತದೆ.

ಕರ್ನಾಟಕದ ಪ್ರಸಕ್ತ ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತ ಸಂಕುಚಿತತೆಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯ ಸ್ವಾರ್ಥಸಾಧನೆಯ ವಸ್ತುವಾಗಿಸದೆ, ಈಗಿನ ಎನ್.ಇ.ಪಿ. ಯನ್ನು ಅದರ ಗುಣಾಧಾರದಲ್ಲಿ ವಿರುದ್ಧ ಶೈಕ್ಷಣಿಕ ದೃಷ್ಟಿಯಿಂದ ಪರಾಮರ್ಶನ ನಡೆಸಬೇಕೆಂದು, ಅದರಲ್ಲಿ ವಾಸ್ತವಿಕವಾಗಿಯೂ ಸಣ್ಣ-ಪುಟ್ಟ ಕೊರತೆಗಳು ಹಾಗೂ ದೋಷಗಳು ಕಂಡು ಬಂದಲ್ಲಿ ಅವುಗಳನ್ನು ವಿದ್ಯಾರ್ಥಿಗಳ ಹಿತದ ಹಿನ್ನೆಲೆಯಲ್ಲಿ ಸರಿಪಡಿಸಿಕೊಂಡು ಎನ್.ಇ.ಪಿ. ವಿರೋಧದ ತನ್ನ ನಿಲುವನ್ನು ಕೈಬಿಡಬೇಕೆಂದು ಆಗ್ರಹಿಸುತ್ತದೆ.

ಇಡೀ ದೇಶದಲ್ಲಿ ನಮ್ಮ ಕರ್ನಾಟಕವು, ಅದನ್ನು ಮೊದಲ ಬಾರಿಗೆ 2020-2021 ರಲ್ಲಿ ಜಾರಿಗೊಳಿಸಿದ ರಾಜ್ಯವಾಗಿದೆ ಎಂಬ ಹೆಮ್ಮೆಗೂ ಪಾತ್ರವಾಗಿದೆ. ಇಂತಹ ಶಿಕ್ಷಣ ನೀತಿಯನ್ನು ಆದು ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ಪ್ರಸಕ್ತ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾದದು, ಪ್ರರ್ವಾಗ್ರಹ ಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾದಕವಾದದು, ತಾರ್ಕಿಕವಾಗಿರದೆ ವಿವೇಚನಾರಹಿತವಾದುದು, ಆದ್ದರಿಂದಲೆ ಖಂಡನೀಯವಾಗಿದೆ.

NEP ಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ, ದೇಶಾದ್ಯಂತ ಶಿಕ್ಷಣ ತಂದು ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜೊತೆಗೆ ನಿರಂತರ ಸಂವಹನ ಮಾಹಿತಿ ವಿನಿಮಯ – ಚರ್ಚೆ ನಡೆಸಿ ತಯಾರಿಸಿದ ಕರಡಿನ ಆಧಾರದಲ್ಲಿ ಈ ನೀತಿಯನ್ನು ರೂಪಿಸಿರುವುದಾಗಿದೆ.  ಈಗಿನ ಎನ್‍ಇಪಿಯು ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರೀತವಾಗಿದ್ದು ಬಹು ಶಿಸ್ತೀಯ ಅಧ್ಯಯನಕ್ಕೆ, ಕೌಶಲ್ಯಾಧಾರಿತ ಶಿಕ್ಷಣಕ್ಕೆ, ಭಾರತದ ಬಹುಭಾಷಿಕ ಹಾಗೂ ಸಾಂಸ್ಕøತಿಕ ಬಹುತ್ವಕ್ಕೆ. ಪ್ರಾಂತೀಯ-ಸ್ಥಳೀಯ ಭಾಗ್ಯಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯ ನೀಡಿ ರೂಪಿಸಿರುವಂತಹದಾಗಿದೆ.

ಎನ್.ಇ.ಪಿ.ಬಗೆಗಿನ ವಿರೋಧ ಏತಕ್ಕಾಗಿ? ಯಾವ ಶೈಕ್ಷಣಿಕ ಹಾಗೂ ತರ್ಕಬದ್ಧ ಕಾರಣಗಳಿಗಾಗಿ-? ಈಗ ಜಾರಿಯಲ್ಲಿರುವ ಓಇPಯ ಬಗ್ಗೆ, ಅದರ ಸಾಧಕ-ಭಾದಕಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೆ, ಆ ಕುರಿತು ಶಿಕ್ಷಣ ತಜ್ಞರ ಸೆಮಿನಾರ್ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡದೆ ಅದರ ರದ್ದತಿಯ ಘೋಷಣೆ ಆದೆಷ್ಟು ಸರಿ. ಎನ್.ಇ.ಪಿ.ಯ ರದ್ದತಿ ರಾಜಕೀಯ ಸೇಡುತೀರಿಸುತ್ತಿರುವ ಅಸ್ತ್ರವಾಗಿದೆಯೇ ? ಹಾಗಿಲ್ಲವಾದಲ್ಲಿ ಅದನ್ನು ರದ್ದುಗೊಳಿಸುವ ತಿರ್ಮಾನವನ್ನು ಮೊದಲೇ ಪ್ರಕಟಿಸಿ ಆನಂತರ ರಾಜ್ಯದ ಉಪಕುಲಪತಿಗಳ ಸಭೆ ಕರೆದು ಅಭಿಪ್ರಾಯ ಕೇಳುವುದು ‘ಚುನಾವಣಾ ಪ್ರಣಾಳಿಕೆಯಲ್ಲಿಯೇ NEP ರದ್ದತಿ ಬಗ್ಗೆ ಹೇಳಿದ್ದೇವೆ ಎನ್ನುವವರು ಯಾವ ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡಿರುವಿರ ?

NEP ಆಧಾರದ ಶಿಕ್ಷಣದಲ್ಲಿ, ಐ.ಐ.ಟಿ, ಐ.ಐ.ಎಂ, ಐ.ಐ.ಎಸ್ ಸಿ, ಕೇಂದ್ರೀಯ ವಿ.ವಿಗಳು ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಎಲ್ಲೆಡೆಯ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ, ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕು ಏನು ಮಾಡಬೇಕು? ಅವರ ಸ್ಥಿತಿ ತ್ರಿಶಂಕುವಿನ ಸ್ಥಿತಿಯೇ?  ಎನ್‍ಇಪಿ ರದ್ದತಿಯ ನಿಲುವು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದುಡುವುದಿಲ್ಲವೇ? ಎಲ್ಲಕ್ಕಿಂತ ಮುಖ್ಯವಾಗಿ, NEP ಯನ್ನು ರದ್ದುಗೊಳಿಸುವನೆಂದು ಹೇಳಿಕೊಳ್ಳುತ್ತಿರುವವರು ಅದನ್ನು ರೂಪಿಸಿದವರ? ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೊತೆಯಲ್ಲಿ ಚರ್ಚಿಸಿ – ನಂತರ ತಿರ್ಮಾನಿಸುವ ಸವಾಲನ್ನೇಕೆ ಸ್ವೀಕರಿಸುತ್ತಿಲ್ಲ? ಎಂದು ಪ್ರಶ್ನಿಸಲಾಯಿತು.

ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್‍ಕೋರಿ ಮಾತನಾಡಿದರು, ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಪ್ರಾಂತ ಕಾರ್ಯಸಮಿತಿ ಆದರ್ಶ್, ಜಿಲ್ಲಾ ಸಂಚಾಲಕ ಸಿದ್ದೇಶ್, ಕನಕರಾಜ್, ಮನೋಜ್, ಭರತ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!