ನವದೆಹಲಿ: ಕೇಂದ್ರ ಸರ್ಕಾರದಿಂದ ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿಯಂದು ಬೋನಸ್ ಸಿಕ್ಕಂತಾಗಿದೆ. ಇಂದಿನ ಸಚಿವ ಸಂಪುಟದಲ್ಲಿ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಆಗಿ ಎರಡೂವರೆ ತಿಂಗಳ ಸಂಬಳವನ್ನು ಗಿಫ್ಟ್ ಆಗಿ ನೀಡಲಾಗುತ್ತಿದೆ.
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ದೀಪಾವಳಿ ಹಬ್ಬದ ನಿಮಿತ್ತ ರೈಲ್ವೇ ಉದ್ಯೋಗಿಗಳಿಗೆ 78 ದಿನದ ಸಂಬಳವನ್ನು ಬೋನಸ್ ಆಗಿ ನೀಡಲಾಗುತ್ತಿದೆ. ಬೋನಸ್ ಲಾಭವಾಗಿ 11.27 ಲಕ್ಷ ಹಾಗೂ 1,823 ಕೋಟಿ ರೂಪಾಯಿ ಒಟ್ಟು ಬೋನಸ್ ನೀಡಲು ಸೂಚನೆ ನೀಡಲಾಗಿದೆ. ವಾರ್ತಾ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಈ ಸಂಬಂಧ ಮಾಹಿತಿ ನೀಡಿದ್ದಾರೆ.