ಚಿತ್ರದುರ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ, ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಕಂಪ್ಲಿ ಅವರ ಸಂಸ್ಕೃತಿ ಚಿಂತನೆಗಳ ನವಿಲು ಗನ್ನಡಿ ಕೃತಿಯು ಸ್ನೇಹಿತರ ಸಮಾಗಮದಲ್ಲಿ ದುರ್ಗದ ಕೋಟೆಯಲ್ಲಿ ಬಿಡುಗಡೆ ಮಾಡಲಾಯಿತು.
ಪತ್ರಕರ್ತ ಕ.ಮ.ರವಿಶಂಕರ್, ತುರುವನೂರು ಮಂಜುನಾಥ, ವಾಹಿದ್,ಕೃತಿಕಾರ ಡಾ.ಶಿವಕುಮಾರ್ ಕಂಪ್ಲಿ ಹಾಗೂ ಸಾಗರ ಎಲ್ ಐಸಿ ಕಚೇರಿ ವ್ಯವಸ್ಥಾಪಕ ಹರೀಶ್ ಬೇದ್ರೆ ಮಾತನಾಡಿ,ಇದೊಂದು ವಿಶಿಷ್ಟ ಕಾರ್ಯಕ್ರಮ ಬೆಟ್ಟದ ಮೇಲೆ ಸ್ನೇಹಿತರ ಸಮಾಗಮದಲ್ಲಿ ಕೃತಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಸ್ಕೃತಿ ಯೊಂದಕ್ಕೆ ನಾಂದಿ ಹಾಡಿದಂತಾಗಿದೆ ಎಂದರು.
ಹಲವಾರು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಇದ್ದ ಪದವಿ ಕಾಲೇಜಿನ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿ ಇಂಥ ಅರ್ಥಪೂರ್ಣ ಕಾರ್ಯಕ್ರಮ ನಿಜಕ್ಕೂ ವಿಶೇಷಗಳಲ್ಲಿ ವಿಶೇಷತೆ ಎಂದರು.
ಈ ವೇಳೆ ಪತ್ರಕರ್ತ ಕ.ಮ.ರವಿಶಂಕರ್,ಬೆಟ್ಟದ ಮೇಲೆ ಹಿಂದೆ ಬಿ.ಎಲ್.ವೇಣು ಅವರ ಬಿಚ್ಚುಗತ್ತಿ ಬರಮಣ್ಣ ನಾಯಕ ಕಾದಂಬರಿ ಬಿಡುಗಡೆಗೊಂಡಿತ್ತು ಆದರೆ ಅದು ಮಠದ ಸಾರತ್ಯದಲ್ಲಿ ನಡೆದ ಕಾರಣ ನೂರಾರು ಮಂದಿ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು,ಆದರೆ ಶಿವಕುಮಾರ ಕಂಪ್ಲಿ ಅವರ ನವಿಲುಗನ್ನಡಿ ಕೃತಿ ಈ ರೀತಿಯ ಸ್ನೇಹಿತರ ಸಮಾಗಮದಲ್ಲಿ ಬಿಡುಗಡೆಗೊಂಡಿರುವುದು ವಿಶೇಷ ಅರ್ಧಕ್ಕೆ ಸಾಕ್ಷಿಯಾಗಿದೆ.
ಈ ಕೃತಿ ಹಲವು ಉಪಯುಕ್ತ ಮಾಹಿತಿಗಳನ್ನು ಹೊಂದಿದ್ದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳ ಅಧ್ಯಯನಕ್ಕೆ ಯೋಗ್ಯವಾಗಿದೆ ಆ ನಿಟ್ಟಿನಲ್ಲಿ ಈ ಕೃತಿ ವಿವಿ ಪಠ್ಯಕ್ಕೆ ಆಯ್ಕೆಯಾಗಲಿ ಎಂದು ಆಶಿಸಿದರು.