Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ‌ ಬಾಲಿವುಡ್ ಗಾಯಕ ಆರೋಪ: ಜೀವಬೆದರಿಕೆಯ ಜೊತೆಗೆ ಏನೆಲ್ಲಾ ಹೇಳಿದ್ರು..?

Facebook
Twitter
Telegram
WhatsApp

 

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಫೇಮಸ್ ಗಾಯಕ ಲಕ್ಕಿ ಅಲಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ನಲ್ಲಿ, ಭೂಮಾಫಿಯಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಹಾಕಿದ್ದಾರೆ.

‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ‌ ಮತ್ತು ಪತಿ ಐಎಎಸ್ ಸುಧೀರ್ ರೆಡ್ಡಿ ಭೂ ಮಾಫಿಯಾ ಜೊತೆಗೆ ಕೈ ಜೋಡಿಸಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಯಲಹಂಕ ಬಳಿ ಇರುವ ನನ್ನ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಲವಂತವಾಗಿ ನನ್ನ ಜಮೀನನ್ನು ಕಬಳಿಸುವ ಯತ್ನ ನಡೆಯುತ್ತಿದೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದೆ. ಕಳೆದ ಐವತ್ತು ವರ್ಷಗಳಿಂದ ನಾನು ಅಲ್ಲಿ ವಾಸ ಮಾಡುತ್ತಿದ್ದೇನೆ. ಸ್ಥಳೀಯ ರೌಡಿಗಳನ್ನು ನನ್ನ ಮೇಲೆ ದಾಳಿ ಮಾಡಲು ಸೇರಿಸಿಕೊಂಡಿದ್ದಾರೆ.

ಲಕ್ಕಿ ಅವರ ತಂದೆ ಮೊಹಮ್ಮದ್ ಅಲಿ 1969ರಲ್ಲಿ ಯಲಹಂಕ ಬಳಿ 400 ಎಕರೆ ಜಮೀನನ್ನು ಖರೀದಿ ಮಾಡಿದ್ದರು. ಅದರಲ್ಲಿ ಈಗಾಗಲೇ 220 ಎಕರೆ ಜಮೀನನ್ನು ಕಳೆದುಕೊಂಡಿದ್ದಾರೆ. ಇನ್ನುಳಿದ 160 ಎಕರೆ ಭೂಮಿಯನ್ನು ತಮ್ಮ ಆರು ಮಕ್ಕಳಿಗೆ ಲಕ್ಕಿ ವರ್ಗಾವಣೆ ಮಾಡಿದ್ದಾರೆ. ಆದರೆ 1991ರ‌ ನಂತರ ಬೇರೆ ಬೇರೆ ಡೀಲರ್ಸ್ ಗಳಿಗೆ ಮಾರಾಟ‌ ಮಾಡುತ್ತಾರೆ. ಅಲ್ಲಿಂದ ಕಾನೂನು ಸಮಸ್ಯೆ ಶುರುವಾಗಿದೆ ಎನ್ನಲಾಗಿದೆ. ಇನ್ನು ಲಕ್ಕಿ ಅವರಿಗೆ ಅನಾರೋಗ್ಯ ಕಾಡುವುದಕ್ಕೆ ಶುರುವಾದ ಮೇಲೆ ಮಾಫಿಯಾ ಗ್ಯಾಂಗ್, ಜಮೀನಿನ ದಾಖಲೆಗಳನ್ನು ತಿರುಚಿದ್ದಾರೆ ಎನ್ನಲಾಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ನೀವು ಇಷ್ಟಪಟ್ಟವರ ಜೊತೆ ಮದುವೆ ನಿಶ್ಚಿತ

ಈ ರಾಶಿಯವರು ನೀವು ಇಷ್ಟಪಟ್ಟವರ ಜೊತೆ ಮದುವೆ ನಿಶ್ಚಿತ, ಈ ರಾಶಿಯ ಹೋಟೆಲ್, ಬೇಕರಿ ಉದ್ಯಮದಾರರು ಆರ್ಥಿಕ ಸಂಕಷ್ಟದಿಂದ ಪಾರು ಲಾಭದ ಕಡೆಗೆ ಪ್ರಯಾಣ, ಸೋಮವಾರರಾಶಿ ಭವಿಷ್ಯ ಜೂನ್-3,2024 ಸೂರ್ಯೋದಯ: 05:44, ಸೂರ್ಯಾಸ್ತ :

ವಾಹನ ಸವಾರರಿಗೆ ಶಾಕ್ :  ಟೋಲ್ ಶುಲ್ಕ ಹೆಚ್ಚಿಸಿದ NHAI

  ಸುದ್ದಿಒನ್, ನವದೆಹಲಿ, ಜೂ.02  : ಭಾರತದಾದ್ಯಂತ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಟೋಲ್ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಸರಾಸರಿ 5 ಪ್ರತಿಶತದಷ್ಟು ಟೋಲ್ ಶುಲ್ಕವನ್ನು NHAI ಹೆಚ್ಚಿಸಿದೆ. ಪ್ರತಿ ವರ್ಷ ಏಪ್ರಿಲ್ 1 ರಿಂದ

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಶಿಕ್ಷಣ ಅಗತ್ಯ : ಉಮೇಶ್ ವಿ. ತುಪ್ಪದ

  ಸುದ್ದಿಒನ್, ಚಿತ್ರದುರ್ಗ, (ಜೂ, 2) : ವಿದ್ಯಾರ್ಥಿಗಳ ಮನೋಭೂಮಿಕೆಯನ್ನು ಹದ ಮಾಡಿ ಅದರಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡಗೆ ಗಮನ ಹರಿಸಿ ಪಾಠವನ್ನು ಮಾಡುವಂತಹ ಯಾವುದೇ ಅಧ್ಯಾಪಕ ಅವರ ಮನಸ್ಸಲ್ಲಿ ಸದಾ

error: Content is protected !!