ಬೆಂಗಳೂರು: ಈ ಹಿಂದೆ 7 ಮತ್ತು 10ನೇ ತರಗತಿ ಮಕ್ಕಳಿಗೆ ಬೋರ್ಡ್ ಎಕ್ಸಾಂ ಇತ್ತು. ಇತ್ತಿಚೆಗೆ 7ನೇ ತರಗತಿಯೂ ಕ್ಯಾನ್ಸಲ್ ಆಗಿತ್ತು. ಇದೀಗ ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆಗಳು ನಡೆದಿವೆ. ಈ ಬಾರಿಯಿಂದ 9 ಮತ್ತು 11ನೇ ತರಗತಿಯ ಮಕ್ಕಳಿಗೆ ಬೋರ್ಡ್ ಎಕ್ಸಾಂ ಪದ್ದತಿ ತರುವುದಕ್ಕೆ ಇಲಾಖೆ ನಿರ್ಧಾರ ಮಾಡಿದೆ.
ಈ ನಿರ್ಧಾರ ಮಾಡಿರುವುದು ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ. 9ನೇ ತರಗತಿ ಮಕ್ಕಳಿಗೆ ಸಂಕಲಾನಾತ್ಮಕ ಮೌಲ್ಯಮಾಪನ ಪರೀಕ್ಷೆ ಹಾಗೂ 11ನೇ ತರಗತಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ವಿರೋಧದ ನಡುವೆಯೂ 2023-24ರಲ್ಲಿ ಇಲಾಖೆ ಬೋರ್ಡ್ ಎಕ್ಸಾಂ ಬರೆಸಲಿದೆ. ಶಿಕ್ಷಣ ಇಲಾಖೆ ಕಳೆದ ವರ್ಷವಷ್ಟೆ 5 ಮತ್ತು 8ನೇ ತರಗತಿ ಮಕ್ಕಳಿಗೆ ಪರೀಕ್ಷೆಯನ್ನು ನಡೆಸಿತ್ತು. ಇದೀಗ 9 ಮತ್ತು 11ನೇ ತರಗತಿ ಮಕ್ಕಳಿಗೆ ಬೋರ್ಡ್ ಎಕ್ಸಾಂ ನಡೆಸಲು ನಿರ್ಧಾರ ಮಾಡಿದ್ದು, ಈಗಾಗಲೇ ಸರ್ಕಾರಿ ಶಾಲೆ, ಅನುದಾನಿತ ರಹಿತ ಖಾಸಗಿ ಶಾಲೆಗಳಿಗೆ ಆದೇಶದ ಪದರತಿ ಕಳುಹಿಸಲಾಗಿದೆ. ಈ ವರ್ಷ ಶಿಕ್ಷಕರು ಹಾಗೂ ಮಕ್ಕಳು ಇಬ್ಬರು ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ.