ದೆಹಲಿ: ಇಂದು ಮಾಜಿ ಐಪಿಎಸ್ ಅಧಿಕಾರಿ ದೆಹಲಿ ಸಿಎಂ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯ ಪಕ್ಷದ ಕಚೇರಿಯಲ್ಲಿ ಸೇರಿದ್ದಾರೆ. ಪಕ್ಷ ಸೇರಿದ ಬಳಿಕ ಮಾತನಾಡಿರುವ ಭಾಸ್ಕರ್ ರಾವ್ ಒಂದಷ್ಟು ಭರವಸೆಯ ಮಾತುಗಳನ್ನಾಡಿದ್ದಾರೆ.
ಆಮ್ ಆದ್ಮಿಪಕ್ಷ ಸೇರಿ 32 ವರ್ಷದ ಹಿಂದೆ ಸೇವಾ ಮನೋಭಾವದಿಂದ ಸೇರಿದ್ದೆ. ಅದು ಇನ್ನಷ್ಟು ವಿಸ್ತಾರ ಆಗಬೇಕು ಅನ್ನಿಸಿತು. ಆಮ್ ಆದ್ಮಿ ಪಕ್ಷದಲ್ಲಿ ಭ್ರಷ್ಟಾಚಾರ ಇಲ್ಲ, ಜಾತಿ ಇಲ್ಲ ಅರವಿಂದ್ ಕೇಜ್ರಿವಾಲ್ ಅವರ ಉತ್ತಮ ನಾಯಕತ್ವದಲ್ಲಿ ಕೇವಲ ದೆಹಲಿಯಲ್ಲಿ ಮಾತ್ರವಲ್ಲ ಪಂಜಾಬ್ ನಲ್ಲೂ ಒಳ್ಳೆ ಆಡಳಿತ ಕೊಡಲು ಸಿದ್ಧವಾಗಿದ್ಸಾರೆ. ಹೀಗಾಗಿ ಕರ್ನಾಟಕಕ್ಕೆ ಒಳ್ಳೆ ಆಡಳಿತ ಸಿಗುತ್ತೆ ಅನ್ನೊ ಭರವಸೆ.
ನಾವೂ ಯಾರಿಗೂ ಸೋಲಿಸೋದಕ್ಕೆ ಗೆಲ್ಲಿಸೋದಕ್ಕೆ ಅಲ್ಲ. ಇಲ್ಲಿ ಯಾರನ್ನು ಕಡೆಗಣಿಸಿ ಮಾತಾಡೋದು ಬೇಡ. ಜನಸಾಮಾನ್ಯರ ಏಳಿಗೆಗಾಗಿ ಇಲ್ಲಿ ದುಡಿಯೋಣಾ ಎಂದಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಎಲ್ಲಾ ಪಕ್ಷಗಳ ಕಾರ್ಯಗಳಲ್ಲೂ ಒಳಗಡೆ, ಹೊರಗಡೆ ನಿರ್ವಹಿಸುತ್ತಿದೆ. ಆದ್ರೆ ಇಲ್ಲಿ ಕಾರ್ಯಕ್ರಮ ನಡೆಯೋದು ಡಿಫ್ರೆಂಟ್. ಬೇರೆ ಐಡಿಯಾಲಾಜಿ ಇಟ್ಟುಕೊಳ್ಳದೆ ಬಡವರು, ದೇಶ, ಅಭಿವೃದ್ಧಿ ಅನ್ನೋ ಯೋಜನೆಯಲ್ಲೇ ನಾವೂ ಸಾಗಿ ಬಂದದ್ದು. ಇಲ್ಲಿಯೂ ಅದೇ ಇದೆ. ಕೇಜ್ರಿವಾಲ್ ಅವರೇ ಸ್ಪೂರ್ತಿ ನೀಡಿದ್ದು. ನೀನೂ ಪೊಲೀಸ್ ಆಫೀಸರ್ ಇದ್ದೀಯಾ ಬಂದು ಸೇರಬೇಕು ಅಂತಿದ್ದರು. ನಾನೂ ಕೂಡ ಸಮಯ ಬರಲಿ ಅಂತ ಕಾಯುತ್ತಿದ್ದೆ.
ನಮ್ಮ ನಾಯಕರ ಮಾರ್ಗದರ್ಶನ ಇದ್ದೆ ಇದೆ. ಜೊತೆಗೆ ಕೆಳಮಟ್ಟದಲ್ಲಿ ಹಳೆಯ ಕಾರ್ಯಕರ್ತರು ಇದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಚುನಾವಣೆಗೆ ಪಾರದರ್ಶಕತೆ, ಪ್ರಾಮಾಣಿಕತೆ ಇರುವವರನ್ನು ತರಬೇಕಾಗುತ್ತದೆ. ಕರ್ನಾಟಕದ ರಾಜಕೀಯ ರಂಗದಲ್ಲಿ ಒಂದು ಸ್ವಚ್ಛತೆ ಬರುವಂತೆ ಮಾಡುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾರೆ.