Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭದ್ರಾವತಿಯ ಕೊರಿಯೋಗ್ರಾಫರ್ ನವ್ಯಾ ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಗಂಡ..!

Facebook
Twitter
Telegram
WhatsApp

 

ಬೆಂಗಳೂರು: ಭದ್ರಾವತಿ ಮೂಲದ ನವ್ಯಾ ಕಳೆದ ಮೂರು ವರ್ಷದ ಹಿಂದೆ ಕಾರು ಚಾಲಕ ಕಿರಣ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಎರಡು ದಿನದ ಹಿಂದೆ ಹೆಂಡತಿಯನ್ನೇ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಿದ್ದ. ಅದೇ ಚಾಕುವಿನಲ್ಲಿ ಕುತ್ತಿಗೆ ಕೊಯ್ದುಕೊಳ್ಳುವುದಕ್ಕೆ ಹೋಗಿದ್ದ ಭಯವಾಗಿ, ಬಾತ್ ರೂಮಿನಲ್ಲಿದ್ದ ಪೆನಾಯಿಲ್ ಕುಡಿದು ಸಾಯಲು ಯತ್ನಿಸಿದ್ದ. ತಕ್ಷಣ ಬದುಕಬೇಕೆಂದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದ. ಹೆಂಡತಿಯನ್ನು ಕೊಂದವ ಈಗ ಪೊಲೀಸರ ವಿಚಾರಣೆಯಲ್ಲಿ ಹೆಂಡತಿಯನ್ನು ಕೊಂದಿದ್ದೇಕೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

‘ಸಾರ್ ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ನಾನು ಮಾಡುವುದಕ್ಕೂ ಹೋಗಿರಲಿಲ್ಲ‌. ನನ್ನ ಹೆಂಡತಿ ಬೇರೊಬ್ಬರ ಜೊತೆಗೆ ಸಲುಗೆಯಿಂದ ಇರುವುದಕ್ಕೆ ಶುರು ಮಾಡಿದ್ದಳು. ಅದನ್ನು ನಾನು ಗಮನಿಸಿದ್ದೆ. ಇದೆ ವಿಚಾರಕ್ಕೆ ನಮ್ಮಿಬ್ಬರ ನಡುವೆ ಹಲವು ಬಾರಿ ಜಗಳವಾಗಿದೆ. ಆಗಸ್ಟ್ 28ರ ರಾತ್ರಿ ಕುಇಡ ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ.

ನವ್ಯಾ ನನಗೆ ಚಾಕು ತೋರಿಸಿ ಬೆದರಿಸಿದ್ದಳು. ಮನೆಯಿಂದ ಹೋಗು. ನಿನ್ನ ಸಹವಾಸ ನನಗೆ ಸಾಕಾಗಿದೆ. ನನಗೆ ಡಿವೋರ್ಸ್ ಬೇಕು ಎಂದು ಕೇಳಿದ್ದಳು. ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದೆ, ಚಾಕು ಹಾಕಿಬಿಡುತ್ತಾಳೇನೋ ಎಂಬ ಭಯದಿಂದ ಹೊರಗೆ ಹೋದೆ. ಇದಾದ ಬಳಿಕ ಸ್ವಲ್ಪ ಸಮಯ ಬಿಟ್ಟು ನವ್ಯಾ ಜೊತೆಗೆ ಮಾತನಾಡುವುದಕ್ಕೆಂದು ಹೋದೆ. ಆದರೆ ಚಾಕು ಆಗಲು ತಲೆದಿಂಬಿನ ಕೆಳಗೆ ಇಟ್ಟುಕೊಂಡಿದ್ದಳು. ಅದನ್ನು ಕಂಡು ಕಬ್ಬಿಣದ ರಾಡ್ ನಿಂದ ಅವಳಿಗೆ ಹೊಡೆದೆ. ಅದೇ ಚಾಕುವಿನಿಂದ ಕತ್ತು ಕೊಯ್ದೆ. ಆಗ ನವ್ಯಾ ಗೆಳತಿ ಐಶ್ವರ್ಯಾ ಕುಇಡ ಬೆಡ್ ರೂಮಿನಲ್ಲಿಯೇ ಇದ್ದರು. ನವ್ಯಾ ಹಾಗೂ ಐಶ್ವರ್ಯಾ ಪಾರ್ಟಿ ಮುಗಿಸಿಕೊಂಡು ಬಂದಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಗಲಾಟೆಯಾದರೂ ಐಶ್ವರ್ಯಾಗೆ ಎಚ್ಚರವಾಗಲಿಲ್ಲ’ ಎಂದು ಹೇಳಿದ್ದಾನೆ.

ಇನ್ನು ಬೆಳಗ್ಗೆ ದಚ್ಚರವಾದಾಗ ನವ್ಯಾ ಸ್ಥಿತಿ ಕಂಡು ಐಶ್ವರ್ಯಾ ಕಿರುಚಿಕೊಂಡಿದ್ದಾಳೆ. ಅಕ್ಕ ಪಕ್ಕದವರೆಲ್ಲ ಬಂದು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ : ಎಎಪಿ ಜಗದೀಶ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇದನ್ನು ತಡೆಯುವ ಸಲುವಾಗಿ ಭ್ರಷ್ಠಾಚಾರ

ನಿಮ್ಮ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದ್ಯಾ..? ಹಾಗಾದ್ರೆ ಸರಿಯಾಗಲು ಹೀಗೆ ಮಾಡಿ

ಬೆಂಗಳೂರು: ನಕಲಿ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡ್ತೀವಿ ಎಂದು ಸರ್ಕಾರ ಹೇಳಿತ್ತು. ಆದ್ರೆ ಅನರ್ಹರ ಜೊತೆಗೆ ಅರ್ಹರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆ. ಇದರಿಂದ ಸಾಕಷ್ಟು ಜನ ನಿಂದಿದ್ದಾರೆ. ಅರ್ಹರ ಬಿಪಿಎಲ್ ಕಾರ್ಡ್

error: Content is protected !!