ಚಿಕ್ಕೋಡಿ: ಇತ್ತಿಚೆಗೆ ಭ್ರಷ್ಟಾಚಾರ ಎಂಬುದು ಗುಟ್ಟಾಗಿ ಉಳಿದಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಕಾಮಾಗಾರಿಗಳಲ್ಲೂ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಆದರೆ ಕಳಪೆ ಕಾಮಗಾರಿ ಬಗ್ಗೆ ಮಾತನಾಡುವ ಮುನ್ನ ಎಚ್ಚರವಹಿಸಬೇಕು ಎಂಬುದನ್ನು ಚಿಕ್ಕೋಡಿಯ ಒಂದು ಘಟನೆ ಮನವರಿಕೆ ಮಾಡಿಕೊಡುತ್ತಿದೆ.
ವಿನಯ ಬಿದರಮಳ್ಳಿ ರಸ್ತೆಯ ಕಾಮಾಗಾರಿ ಕಳಪೆಯಾಗಿದೆ. ರಸ್ತೆ ಮಧ್ಯೆದಲ್ಲಿಯೇ ಕಿತ್ತು ಹೋಗಿದೆ. ಇದನ್ನು ನೋಡಿದ ಗ್ರಾಮಸ್ಥರು, ಕಳಪೆ ಕಾಮಗಾರಿ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಇದರಲ್ಲಿ ಶಾಸಕರ ಪಾಲೆಷ್ಟು ಎಂಬ ಬೋರ್ಡ್ ಹಿಡಿದ ಯುವಕನ ವಿರುದ್ಧ ಶಾಸಕ ಪಿ ರಾಜೀವ್ ಗರಂ ಆಗಿದ್ದಾರೆ. ಇದಕ್ಕೆಲ್ಲ ದಾಖಲೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನಿನ್ನ ಪ್ರಶ್ನೆ ಏನಿದ್ದರು ಅಧಿಕಾರಿಯನ್ನು ಕೇಳಿಕೋ ಎಂದು ಅವಾಜ್ ಹಾಕಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಯುವಕರು ನಮ್ಮ ಶಾಸಕರು ನೀವೆ ಅಲ್ಲವಾ. ನಿಮ್ಮನ್ನೇ ಕೇಳಬೇಕು ಅಲ್ಲವಾ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಶಾಸಕ ರಾಜೀವ್, ಅಲ್ಲೆ ಇದ್ದ ಪೊಲೀಸರಿಗೆ ಹೇಳಿ ಅರೆಸ್ಟ್ ಮಾಡಿಸಿದ್ದಾರೆ. ಶಾಸಕರ ಮಾತಿನಂತೆ ಪೊಲೀಸರು ಪ್ರತಿಭಟನಾನಿರತ ಯುವಕರನ್ನು ವಶಕ್ಕೆ ಪಡೆದಿದ್ದಾರೆ.