ಬೆಂಗಳೂರು: ಎಲ್ಲರಿಗೂ ಗೊತ್ತಿರುವಂತೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಆ ಕಡೆ ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳ್ತಾ ಇದ್ರೆ ಈ ಕಡೆ ಡಿಕೆ ಶಿವಕುಮಾರ್ ಕೂಡ ನಾನೇ ಈ ಬಾರಿಯ ಮುಖ್ಯಮಂತ್ರಿ ಅಂತಿದ್ದಾರೆ. ಅವರ ಮಾತಿಗೆ ಇವರು ಇವರ ಮಾತಿಗೆ ಅವರು ತಿರುಗೇಟು ನೀಡಲು ಶುರು ಮಾಡಿದ್ದಾರೆ.
ಬೆಳಗ್ಗೆ ತಾನೇ ಸಿದ್ದರಾಮಯ್ಯ ಅವರು, ಗೆದ್ದಿರುವ ಶಾಸಕರಲ್ಲಿ ಹೆಚ್ಚಿನ ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ, ಹೈಕಮಾಂಡ್ ನನ್ನನ್ನೇ ಮುಖ್ಯಮಂತ್ರಿ ಮಾಡುವ ವಿಶ್ವಾಸವಿದೆ. ಡಿಕೆಶಿಗಿಂತ ಹೆಚ್ಚು ಮತ ನನಗೆ ಬಂದಿರುವ ವಿಶ್ವಾಸವಿದೆ ಎಂದಿದ್ದರು. ಇದೀಗ ಅವರ ಈ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
“ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 135 ಸೀಟು ಗೆದ್ದಿದೆ. ಯಾರ ನಂಬರ್ ಬಗ್ಗೆಯೂ ಮಾತನಾಡುವ ಶಕ್ತಿ ನನಗಿಲ್ಲ. ಇನ್ನೊಬ್ಬರ ನಂಬರ್ ಬಗ್ಗೆ ನಾನು ಮಾತನಾಡಲ್ಲ. ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದೇವೆ. ನನಗೆ ಯಾವ ಶಾಸಕರೂ ಏನು ಮಾಡಿದ್ದಾರೆ ಗೊತ್ತಿಲ್ಲ. ಎಲ್ಲರೂ ಅಧಿಕಾರಕ್ಕೆ ಆಸೆ ಪಡಲಿ. ಸೋನಿಯಾ ಗಾಂಧಿ ಅವರಿಗೆ 135 ಶಾಸಕರನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.