ಮಂಡ್ಯ: ಚುನಾವಣಾ ಹಿನ್ನೆಲೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಬಳಿ ಹೋಗುತ್ತಿದ್ದಾರೆ. ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಿದೆ. ಕ್ಯಾಂತುಗೆರೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಮಹಿಳೆಯರೆಲ್ಲಾ ಸೇರಿ, ಡಿಕೆ ಶಿವಕುಮಾರ್ ಅವರಿಗೆ ಆರತಿ ಬೆಳಗಿ, ಸ್ವಾಗತ ಮಾಡಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಜಾನಪದ ಕಲೆಯೂ ಮೊಳಗಿತ್ತು. ಜಾನಪದ ಕಲಾ ತಂಡಗಳ ಮೆರವಣಿಗೆ ನಡೆದಿದೆ. ಈ ವೇಳೆ ಡಿಕೆ ಶಿವಕುಮಾರ್ ಅವರು, ಕಲಾವಿದರ ಮೇಲೆ ಹಣವನ್ನು ಎರಚಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಕಲಾವಿದರಿಂದಾನೂ ಬೇಸರ ವ್ಯಕ್ತವಾಗಿದೆ.
ಡಿಕೆ ಶಿವಕುಮಾರ್ ಕಲಾವಿದರ ತಂಡಗಳ ಮೇಲೆ ಹಣವನ್ನು ಎರಚಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನ, ಕಮೆಂಟ್ ಗಳ ಮೂಲಕ ತಮ್ಮ ಬೇಸರ ಹೊರ ಹಾಕಿದ್ದಾರೆ. ಕಲಾವಿದರಿಗೆ ಮೊದಲು ಗೌರವ ನೀಡಿ ಎಂದು ಸಲಹೆಯನ್ನು ನೀಡಿದ್ದಾರೆ. ಕಲಾವಿದರ ಮೇಲೆ ಈ ರೀತಿ ಹಣವನ್ನೆಲ್ಲಾ ಎಸೆಯುವುದು ಶೋಭೆಯಲ್ಲ ಎಂದು ಇನ್ನು ಹಲವರು ಕಮೆಂಟ್ ಹಾಕುತ್ತಿದ್ದಾರೆ.