Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಶಸ್ತಿಗಳು ನಮ್ಮ ಸಾಧನೆಯಿಂದ ಬರಬೇಕೇ ಹೊರತು ಶಿಫಾರಸ್ಸಿನಿಂದಲ್ಲ : ರಾಜ್ಯ ಮಟ್ಟದ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಟಿ.ನಾಗಭೂಷಣ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 07 : ನಮಗೆ ಪ್ರಶಸ್ತಿಗಳು ನಮ್ಮ ಸಾಧನೆಯ ಮೇಲೆ ಬರಬೇಕೇ ವಿನಹ ಶಿಫಾರಸ್ಸುಗಳ ಮೇಲೆ ಬರಬಾರದು. ಈ ರೀತಿಯಾಗಿ ಬರುವ ಪ್ರಶಸ್ತಿಗಳಿಗೆ ಬೆಲೆ ಇರುವುದಿಲ್ಲ ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ.ನಾಗಭೂಷಣ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೋಟರಿ ಕ್ಲಬ್‍ನಲ್ಲಿ ಬುಧವಾರ ರಾತ್ರಿ ನಡೆದ ವಾರದ ಸಭೆಯಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ.ನಾಗಭೂಷಣರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು, ಶಿಕ್ಷಕ ಸಮಾಜದ ನಿರ್ಮಾಣದ ನಿರ್ಮಾತ, ವಿದ್ಯಾರ್ಥಿ ಜೀವನವನ್ನು ಸರಿದಾರಿಯಲ್ಲಿ ನಿರ್ಮಾಣ ಮಾಡುವ ಮಾರ್ಗದರ್ಶಕ. ಶಿಕ್ಷಕನಾದವನು ಸಹಾ ಸದಾ ವಿದ್ಯಾರ್ಥಿಯಾಗಿಯೇ ಇರಬೇಕಿದೆ. ಕಲಿಯುವುದನ್ನು ನಿಲ್ಲಿಸಬಾರದು.ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕಿದೆ. ಆಗ ಮಾತ್ರ ಸಮಾಜಕ್ಕೆ ಉತ್ತಮವಾದ ಪ್ರಜೆ ನಿರ್ಮಾಣವಾಗಲು ಸಾಧ್ಯವಿದೆ ಎಂದರು.

ನಮಗೆ ಪ್ರಶಸ್ತಿಗಳು ನಮ್ಮ ಅರ್ಹತೆ ಮತ್ತು ಸಾಧನೆಯ ಮೇಲೆ ಬರಬೇಕಿದೆ ಇದು ಬಿಟ್ಟು ಶಿಫಾರಸ್ಸು, ಹಣವನ್ನು ನೀಡಿ ಪ್ರಶಸ್ತಿಯನ್ನು ಪಡೆಯಬಾರದು. ಈ ರೀತಿಯಾಗಿ ಬರುವ ಪ್ರಶಸ್ತಿಗಳಿಗೆ ಸಮಾಜದಲ್ಲಿ ಬೆಲೆ ಇರುವುದಿಲ್ಲ, ಅರ್ಹತೆ ಮತ್ತು ಸಾಧನೆಯಿಂದ ಬಂದ ಪ್ರಶಸ್ತಿಯನ್ನು ಪಡೆದಾಗ ಮನಸ್ಸಿಗೆ ಸಂತೋಷವನ್ನು ತಂದು ಕೊಡುತ್ತದೆ.

ಶಿಕ್ಷಕನಾದವನು ತರಗತಿಯಲ್ಲಿ ಬದ್ದತೆಯಿಂದ ಕೆಲಸವನ್ನು ಮಾಡಬೇಕಿದೆ. ಇದರೊಂದಿಗೆ ತಮ್ಮ ಕುಟುಂಬವನ್ನು ಸಹಾ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ. ನನಗೆ ಬಂದ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ಮತ್ತಷ್ಟು ಸಾಧನೆಯನ್ನು ಮಾಡುವ ಮನಸ್ಸು ಬಂದಿದೆ ಎಂದು ನಾಗಭೂಷಣ್ ತಿಳಿಸಿದರು.

ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಈ ವೃತ್ತಿಯನ್ನು ಮಾಡಿದ ಹಲವಾರು ಮಹಾನುಭಾವರು ಉನ್ನತವಾದ ಸ್ಥಾನವನ್ನು ಸಮಾಜದಲ್ಲಿ ಪಡೆದಿದ್ದಾರೆ. ಶಿಕ್ಷಕ ವೃತ್ತಿ ಎಂದರೆ ಸಮಾಜಕ್ಕೆ ಉತ್ತಮವಾದ ಪ್ರಜೆಗಳನ್ನು ನೀಡುವ ಜವಾಬ್ದಾರಿಯುತವಾದ ಕೆಲಸವಾಗಿದೆ. ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿಯಾಗಿ ಇರಬೇಕಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಮುಂದಾಗಿರಬೇಕು ಎಂದು ಹೇಳಿದರು.

ಯೋಗ ಗುರು ತಿಪ್ಪೇಸ್ವಾಮಿ ಮಾತನಾಡಿ, ಯೋಗ ನಮ್ಮ ಪ್ರಾಚೀನವಾದ ಪದ್ದತಿಯಾಗಿದೆ ಇದರಿಂದ ನಮ್ಮ ಪೂರ್ವಜರು ಹಲವಾರು ವರ್ಷ ಬದುಕನ್ನು ನಡೆಸಿದರು, ಪ್ರತಿ ದಿನ ಯೋಗ, ಮಿತವಾದ ಆಹಾರ, ಕಾಯಕವನ್ನು ಮಾಡುವುದರ ಮೂಲಕ ಬೇರೆಯವರಿಗೆ ಮಾರ್ಗದರ್ಶಕರಾಗಿದ್ದರು.ಇಂದಿನ ದಿನಮಾನದಲ್ಲಿ ನಮ್ಮ ದೇಹದಲ್ಲಿನ ಬೊಜ್ಜನ್ನು ಕರಗಿಸಲು, ತೂಕವನ್ನು ಕಡಿಮೆ ಮಾಡಲು ಯೋಗವನ್ನು ಬಳಕೆ ಮಾಡಲಾಗುತ್ತಿದೆ.

ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡುವುದನ್ನು ಪ್ರತಿಯೊಬ್ಬರು ಕಲಿಯಬೇಕಿದೆ. ಯೋಗವನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ಚನ್ನಾಗಿ ಇಟ್ಟುಕೊಳ್ಳಬಹುದಾಗಿದೆ ಎಂದರು. ಯೋಗ ನಮ್ಮ ಶರೀರದಲ್ಲಿನ ಕೊಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಉಪವಾಸ ಮಾಡುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ.

ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಆಹಾರವನ್ನು ಸೇವನೆ ಮಾಡಬೇಕು ಆನಗತ್ಯವಾಗಿ ಹೆಚ್ಚಿನ ಆಹಾರವನ್ನು ಸೇವನೆ ಮಾಡಿ ಅದನ್ನು ಕರಗಿಸಲು ವ್ಯಾಯಾಮ ಅಥವಾ ಯೋಗ ಮಾಡುವುದು ಸರಿಯಲ್ಲ, ನಮ್ಮ ಜೀವನ ಪ್ರಕೃತಿಗೆ ಹೊಂದಿಕೊಂಡಂತೆ ಇರಬೇಕಿದೆ ಅದರ ವಿರುದ್ದವಾಗಿ ಹೋಗುವುದು ಸರಿಯಲ್ಲ. ಯೋಗವನ್ನು ಮಾಡುವುದರಿಂದ ಮನಶಾಂತಿಯನ್ನು ಪಡೆಬಹುದಾಗಿದೆ ಎಂದು ಯೋಗ ಗುರು ತಿಪ್ಪೇಸ್ವಾಮಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಕನಕರಾಜು, ಕಾರ್ಯದರ್ಶಿ ವಿಕ್ರಾಂತ್‍ಜೈನ್ ಸದಸ್ಯರಾದ ಎಸ್,ವಿರೇಶ್, ಶಿವಣ್ಣ ಕುರುಬರಹಳ್ಳಿ, ವೀರಭದ್ರಸ್ವಾಮಿ, ಮೈಲೇಶ್, ಡಾ.ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು, ಶುಕ್ರವಾರ- ರಾಶಿ ಭವಿಷ್ಯ ಜುಲೈ-5,2024 ಸೂರ್ಯೋದಯ: 05:50, ಸೂರ್ಯಾಸ್ತ : 06:50 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ

ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ? ಗಗನ್ ಯಾನ್ ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರು ಹೇಳಿದ್ದೇನು ?

ಸುದ್ದಿಒನ್ : ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ‘ಗಗನ್ ಯಾನ್’ ಮಿಷನ್ ಲಭ್ಯವಾದ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಅಲ್ಲಿಗೆ ಹೋಗಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು. ನಮ್ಮ

5 ತಿಂಗಳ ಜೈಲುವಾಸದ ನಂತರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಮೂರನೇ ಬಾರಿಗೆ ಪ್ರಮಾಣ ವಚನ

ಸುದ್ದಿಒನ್ : ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಗುರುವಾರ ಸಂಜೆ ಮತ್ತೊಮ್ಮೆ ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಚಂಪೈ ಸೊರೆನ್ ಬುಧವಾರ ಸಿಎಂ

error: Content is protected !!