ಚಿತ್ರದುರ್ಗ,(ಏ.19) : ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಾಮರಸ್ಯದಿಂದ ಕೆಲಸ ಮಾಡುವುದರ ಮೂಲಕ ಬೇಸಿಗೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ನಗರಸಭೆಯ ಆವರಣದಲ್ಲಿ ನಗರಸಭೆ, ಗ್ರಾಮೀಣ ಕುಡಿಯುವ ನೀರು ಇಲಾಖೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿನ ತೊಂದರೆ ಇಲ್ಲ, ಆದರೆ ಈಗ ನೀರಿನ ತೊಂದರೆಯಾಗುತ್ತಿದೆ ಎಂದು ನಾಗರೀಕರು ದೂರುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದಾಗ ವಿದ್ಯುತ್ ಸಮಸ್ಯೆಯಿಂದಾಗಿ ನೀರಿನ ಸರಬರಾಜಿನಲ್ಲಿ ತೊಂದರೆಯಾಗಿದೆ ತಿಂಗಳಲ್ಲಿ ಕೆಲವು ದಿನಗಳು ಮಾತ್ರ ಈ ರೀತಿ ಆಗಿದೆ ತದ ನಂತರ ಪೂರ್ಣ ಪ್ರಮಾಣದಲ್ಲಿ ನೀರನ್ನು ನೀಡಲಾಗಿದೆ ಎಂದು ಆಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಸಭೆಯಲ್ಲಿ ಇದ್ದ ಕೆಲ ನಗರಸಭಾ ಸದಸ್ಯರು ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿ ನಮ್ಮ ವಾರ್ಡಿನಲ್ಲಿ 15 ದಿನವಾಗಿದೆ ನೀರು ಬಂದಿಲ್ಲ ಇದರ ಬಗ್ಗೆ ವಿಚಾರಿಸಿದಾಗ ಕರೆಂಟ್ ಇಲ್ಲ ನಾವೇನು ಮಾಡುವುದು ಎಂದು ಉತ್ತರಿಸುತ್ತಾರೆ ಎಂದು ಶಾಸಕರ ಮುಂದೆ ತಮ್ಮ ನೋವನ್ನು ತೋಡಿಕೊಂಡರು.
ಇದರ ಬಗ್ಗೆ ಶಾಸಕರು ಕೆಇಬಿ ಇಂಜಿನಿಯರ್ ಅನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿದಾಗ ಇದರ ಬಗ್ಗೆ ಮಾಹಿತಿ ಇಲ್ಲ ದೂರು ಇದ್ದರೆ ಸರಿಪಡಿಸಿಕೊಂಡು ಭರವಸೆಯನ್ನು ನೀಡಿದರು.
ಈಗ ಶಾಸಕರು ಅಧಿಕಾರಿಗಳಾದವರು ಒಬ್ಬರ ಮೇಲೆ ಒಬ್ಬರು ದೂರು ಹೇಳಬಾರದು ನಿಮ್ಮ ನಿಮ್ಮಲ್ಲಿ ಹೊಂದಾಣಿ ಮಾಡಿಕೊಂಡು ಕೆಲಸವನ್ನು ಮಾಡಬೇಕು ಜನತೆಗೆ ಮುಂದಿನ ದಿನದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಸೂಚಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಶೀಘ್ರವಾಗಿ ನಿಮ್ಮ ಪಾಲಿನ ಕೆಲಸವನ್ನು ಪೂರ್ಣ ಮಾಡಿ ನಗರಸಭೆಗೆ ನೀಡಿ ಇದರಿಂದ ನಗರಕ್ಕೆ ಉತ್ತಮವಾಗಿ ನೀರನ್ನು ನೀಡಲು ಸಾಧ್ಯವಿದೆ ಎಂದರು.
ಕೆಲವೆಡೆಯಲ್ಲಿ ನೀರಿಗಾಗಿ ಸಿಸಿರಸ್ತೆಯನ್ನು ಅಗೆಯುತ್ತಿದ್ದಾರೆ, ಇದರ ಬಗ್ಗೆ ನಿಗಾವಹಿಸಿ ಅವರು ಅದು ಮತ್ತೇ ಯಾವ ರೀತಿ ಇತ್ತೂ ಅದೇ ರೀತಿ ಮಾಡಬೆಕು ಅದರೆ ಮಾತ್ರ ಅಗೆಯಲು ಅವಕಾಶ ನೀಡಿ ಕೆಲವು ಗುತ್ತಿಗೆದಾರರ ಕಾಟಾಚಾರಕ್ಕೆ ಕೆಲಸವನ್ನು ಮಾಡುತ್ತಿದ್ದಾರೆ ಅಂತಹ ಗುತ್ತಿಗೆದಾರರಿಗೆ ಹಣವನ್ನು ನೀಡಬೇಡಿ, ಗುತ್ತಿಗೆದಾರರು ನಿಗಧಿತ ಸಮಯದೊಳೆಗೆ ಕೆಲಸವನ್ನು ಮಾಡಬೇಕು ಇಲ್ಲವಾದಲ್ಲಿ ವಿನಾಕಾರಣ ತೊಂದರೆಯನ್ನು ಮಾಡುತ್ತಾ ಕೆಲಸವನ್ನು ತಡವಾಗಿ ಮಾಡುತ್ತಾ, ನಮಗೆ ನಷ್ಠವಾಗುತ್ತದೆ ಎನ್ನುತ್ತಾರೆ. ಇದರ ಬಗ್ಗೆ ಮುಂಚೆಯೇ ಆಲೋಚಿಸಿ ಟೆಂಡರ್ ಹಾಕುವಾಗಲೇ ಹೆಚ್ಚಿನ ದರವನ್ನು ನಮೂದಿಸಿ ಉತ್ತಮ ರೀತಿಯಾದ ಕೆಲಸವನ್ನು ಮಾಡುವಂತೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಸದಸ್ಯರಾದ ಸುರೇಶ್, ಹರೀಶ್, ತಾರಕೇಶ್ವರಿ, ಮಾಜಿ ಸದಸ್ಯರಾದ ವೆಂಕಟೇಶ್, ವಿರೇಶ್, ಚಕ್ರವರ್ತಿ,ಪೌರಾಯುಕ್ತರಾದ ಹನುಮಂತರಾಜು ಇಂಜಿನಿಯರ್ ಕಿರಣ್ ಸೇರಿದಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.