Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಪ್ರತಿಭಟನೆ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.03): ಐದು ಸಾವಿರ ರೂ.ನಿಂದ ಹಿಡಿದು ಹದಿನೈದು ಸಾವಿರ ರೂ.ಗಳವರೆಗೆ ದಂಡ ಹಾಕುತ್ತಿರುವ ಆರ್.ಟಿ.ಓ. ಹಾಗೂ ಸಂಚಾರಿ ಪೊಲೀಸರ ವಿರುದ್ದ ಆಟೋ ಚಾಲಕರು ಹಾಗೂ ಮಾಲೀಕರುಗಳು ಒನಕೆ ಓಬವ್ವ ಸರ್ಕಲ್‍ನಲ್ಲಿ ಮಂಗಳವಾರ ದಿಢೀರನೆ ಪ್ರತಿಭಟನೆಗೆ ಇಳಿದು ಅಪರ ಜಿಲ್ಲಾಧಿಕಾರಿ ಮತ್ತು ಆರ್.ಟಿ.ಓ.ಗೆ ಮನವಿ ಸಲ್ಲಿಸಿದರು.

ಬಾಯಿಗೆ ಬಂದಂತೆ ಪ್ರಯಾಣಿಕರಿಂದ ಹಣ ಪೀಕುತ್ತಿದ್ದಾರೆಂಬ ಸಬೂಬು ಹೇಳಿ ಆರ್.ಟಿ.ಓ. ಇಲಾಖೆ ಅಧಿಕಾರಿಗಳು ಬಾಡಿಗೆ ನೆಪದಲ್ಲಿ ನೇರವಾಗಿ ಆಟೋಗಳನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಹೋಗಿ ಸೀಜ್ ಮಾಡುತ್ತಿರುವುದನ್ನು ಪ್ರಶ್ನಿಸಿದರೆ ದಾಖಲೆ ಇಲ್ಲದ ಆಟೋಗಳಿಗೆ ಮಾತ್ರ ಫೈನ್ ಹಾಕುತ್ತಿದ್ದೇವೆಂಬ ಉತ್ತರ ನೀಡುತ್ತಿದ್ದಾರೆ.

ದಾಖಲೆ ತೋರಿಸಿದರೂ ಒಪ್ಪುತ್ತಿಲ್ಲ. ಬಹುತೇಕ ಬಡಪಾಯಿ ಆಟೋದವರು ದಿನಕ್ಕೆ ಮುನ್ನೂರರಿಂದ ಐದು ನೂರು ರೂ.ಗಳನ್ನು ದುಡಿದು ಅದರಲ್ಲಿಯೇ ತಮ್ಮ ಕುಟುಂಬ ಸಲಹಬೇಕು ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ರೂ.ಗಳ ದಂಡ ಹಾಕುವುದು ಯಾವ ನ್ಯಾಯ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ನವಭಾರತ ಹಿಂದೂ ದಲಿತ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಪ್ರಶ್ನಿಸಿದರು.

ಒನಕೆ ಓಬವ್ವ ಸರ್ಕಲ್ ಹಾಗೂ ಲೋಕೋಪಯೋಗಿ ಕಚೇರಿ ಎದುರು ಹತ್ತಾರು ಆಟೋಗಳನ್ನು ಸಾಲಾಗಿ ನಿಲ್ಲಿಸಿದ ಚಾಲಕರು ಮತ್ತು ಮಾಲೀಕರುಗಳು ನಮಗೆ ಆಟೋ ಚಾಲನೆ ಬಿಟ್ಟರೆ ಬೇರೆ ಯಾವ ಕಸುಬು ಗೊತ್ತಿಲ್ಲ. ಹಾಗಾಗಿ ದುಬಾರಿ ಮೊತ್ತದ ದಂಡ ವಿಧಿಸಬಾರದು. ಚಿತ್ರದುರ್ಗದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿರುವ ಚಾಲಕರುಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲತ್ತುಗಳು ದೊರಕುತ್ತಿಲ್ಲ. ದುಡಿಮೆಯನ್ನೆ ನಂಬಿರುವ ನಮಗೆ ಜೀವಿಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ದಂಡದ ಮೊತ್ತ ನ್ಯಾಯೋಚಿತವಾಗಿರಲಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಆರ್.ಟಿ.ಓ.ರವರಲ್ಲಿ ವಿನಂತಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸೆಂಥಿಲ್‍ಕುಮಾರ್, ಕುಮಾರಸ್ವಾಮಿ ಸೇರಿದಂತೆ ನೂರಾರು ಆಟೋ ಚಾಲಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನ

ಸುದ್ದಿಒನ್, ಚಿತ್ರದುರ್ಗ: ಜು.07 :  ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ಎಸ್.ಎಸ್.ಎಲ್.ಸಿ,  ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು. ಜುಲೈ 10 ಕೊನೆ ದಿನಾಂಕ ಆಗಿದೆ. ಎಸ್.ಎಸ್.ಎಲ್.ಸಿ ಮತ್ತು

ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಿ, ಗಿಡಮರ ಬೆಳಸಿ ಆರೋಗ್ಯ ಕಾಪಾಡಿಕೊಳ್ಳಿ : ಸಿದ್ದರಾಜು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಜು. 07 :  ನಗರದ ಬ್ಯಾಂಕ್ ಕಾಲೋನಿಯ ಶ್ರೀ ಮುರುಘ ರಾಜೇಂದ್ರ ಆಟದ ಮೈದಾನದಲ್ಲಿ ಟಾರ್ಗೆಟ್

ಜುಲೈ 20 ರಂದು ಗಿನ್ನಿಸ್ ದಾಖಲೆ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಆಚರಣೆ : ಎಸ್.ರವಿಕುಮಾರ್

ಸುದ್ದಿಒನ್, ಚಿತ್ರದುರ್ಗ, ಜುಲೈ. 07 :ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು. ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ದೀಕ್ಷಾ ರಜತ್ ಮಹೋತ್ಸವದ ಪೂರ್ವಭಾವಿ

error: Content is protected !!