ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್.13 : ಬಿಡಿ ಬಿಡಿಯಾಗಿರುವ ರಾಷ್ಟ್ರೀಯ ಅಂಶಗಳನ್ನು ಒಟ್ಟುಗೂಡಿಸಿ ಚಿತ್ರಿಸಿರುವ ಕಲಾಕೃತಿಯನ್ನು ಸ್ವಾತಂತ್ರ್ಯೋತ್ಸವದ ದಿನದಂದು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣದ ನಂತರ ಲಾಂಚ್ ಮಾಡಲಾಗುವುದೆಂದು ಕ್ರಿಯೇಟಿವ್ ವೀರೇಶ್ ತಿಳಿಸಿದರು.
ಜೋಗಿಮಟ್ಟಿ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹದಿನೆಂಟು ರಾಷ್ಟ್ರೀಯ ಅಂಶಗಳನ್ನು ಸೇರಿಸಿ ಕಲಾಕೃತಿಯನ್ನು ರಚಿಸಿದ್ದೇನೆ. ಇದಕ್ಕೆ ಪ್ರದೀಪ್ಚಂದ್ರರವರ ಸಾಹಿತ್ಯ ಸಂಗೀತದ ಹಾಡಿನ ಮೂಲಕ ಲಾಂಚ್ ಆಗಲಿರುವ ಕಲಾಕೃತಿಯಲ್ಲಿ ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು, ಹಣ್ಣು, ಕ್ರೀಡೆ, ಚಲಚರಗಳು, ಆನೆ ಸೊಂಡಿಲಿನಲ್ಲಿ ರಾಷ್ಟ್ರ ಧ್ವಜವನ್ನು ಎತ್ತಿಹಿಡಿದಿರುವುದು, ಕುದುರೆ ರಥವನ್ನು ಎಳೆಯುತ್ತಿರುವುದು, ಜಲಚರಗಳನ್ನು ಕಲಾಕೃತಿಯಲ್ಲಿ ಬಿಂಬಿಸಲಾಗಿದೆ. ಒಟ್ಟಾರೆ ಇದೊಂದು ಎಲ್ಲರಲ್ಲೂ ರಾಷ್ಟ್ರಾಭಿಮಾನ ಮೂಡಿಸುವ ಉದ್ದೇಶವಿಟ್ಟುಕೊಂಡು ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಅಖಂಡತ್ವವನ್ನು ರೂಪಿಸುವ ಪ್ರಯತ್ನ ಎಂದು ಹೇಳಿದರು.
ಡಾ.ಲೋಕೇಶ್ ಅಗಸನಕಟ್ಟೆ, ಪ್ರದೀಪ್ ಚಂದ್ರ, ನಿವೃತ್ತ ಪ್ರಾಚಾರ್ಯರಾದ ಅಶೋಕ್ಕುಮಾರ್ ಸಂಗೇನಹಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.