ಬೆಂಗಳೂರು: ಇಂದು ಸದನದಲ್ಲಿ ಆರ್ಎಸ್ಎಸ್ ಬಗ್ಗೆ ಜೋರು ಚರ್ಚೆಯಾಗಿದೆ. ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸುತ್ತಿದ್ದರು. ಈ ವೇಳೆ ಸಚಿವ ಅಶೋಕ್ ಬಗ್ಗೆ ಮಾತನಾಡಿ, ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ರಾಜಕೀಯವೆ ಬೇರೆ. ಹೀ ಈಸ್ ಗುಡ್ ಹ್ಯೂಮನ್ ಬೀಯಿಂಗ್. ಮತ್ತೆ ಬಿಜೆಪಿ, ಆರ್ಎಸ್ಎಸ್, ಕಾಂಗ್ರೆಸ್ ಎಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೊಗಳಿದ್ದಾರೆ.
ಇದೇ ವೇಳೆ ಆರ್ ಅಶೋಕ್ ಮಾತನಾಡಿ ಮತ್ತೆ RSS ಗೆ ಹೋಗ್ತಿರಲ್ಲ ಸರ್ ಎಂದಿದ್ದಾರೆ. ನೀವೇಕೆ ನಮ್ಮ RSS ಬಗ್ಗೆ ಅಷ್ಟು ಬೇಸರ ಮಾಡಿಕೊಳ್ತೀರಿ ಎಂದು ಸ್ಪೀಕರ್ ಮಧ್ಯೆ ಪ್ರವೇಶಿಸಿದ್ದಾರೆ. ಬೇಸರ ಎಲ್ಲಾ ಏನು ಮಾಡ್ಕೊಂಡಿಲ್ಲ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. RSS ಅನ್ನೋದು ರಾಷ್ಟ್ರೀಯ ಸೇವಾ ಸಂಘ, ಹೇಳೋದು ತಪ್ಪಾ..? RSS ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಕಾಗೇರಿ ಹೇಳಿದ್ದಾರೆ.
ಪೀಠದ ಮೇಲೆ ಕುಳಿತು ನಮ್ಮ RSS ಅಂತೀರಲ್ಲ ಎಂದು ಜಮೀರ್ ಪ್ರಶ್ನಿಸಿದ್ದಾರೆ. ಇನ್ನೇನು ಮತ್ತೆ..? ನಮ್ಮ RSS, ನಮ್ದೆ ರೀ RSS ಎಂದು ಸ್ಪೀಕರ್ ಹೇಳಿದ್ದಾರೆ. ಇದೇ ವೇಳೆ ಜಮೀರ್ ಸುಳ್ಳು ಹೇಳೋದು ಹೇಗೆ ಎಂದು ಆರಗ ಜ್ಞಾನೇಂದ್ರ ಕೇಳಿದ್ದಾರೆ. ಇಂದಲ್ಲ ನಾಳೆ ನೀವೂ ಕೂಡ ನಮ್ಮ RSS ಅಂತ ಹೇಳಬೇಕಾಗುತ್ತದೆ. ಖಂಡಿತ ಹೇಳಬೇಕಾಗುತ್ತೆ ಜಮೀರ್ ಎಂದು ಕಾಗೇರಿ ಹೇಳಿದ್ದಾರೆ.
ಜಮೀರ್ ಹೋಗಲಿ, ನಾನೇ ತೀರ್ಮಾನಕ್ಕೆ ಬಂದಿದ್ದೇನೆ. ಆರ್ ಎಸ್ ಎಸ್ ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕೆ ನಾನು ವಿರೋಧ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಸಚಿವ ಅಶೋಕ್, ಅಧ್ಯಕ್ಷರೇ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಈಗ ಸರ್ವವ್ಯಾಪಿ ಆಗಿ ಹೋಗಿದೆ. ಈ ದೇಶದ ರಾಷ್ಟ್ರಪತಿ RSS. ಪ್ರಧಾನಿ RSS, ಉಪರಾಷ್ಟ್ರಪತಿ RSS, ಮುಖ್ಯಮಂತ್ರಿಯೂ RSS ಎಂದಿದ್ದಾರೆ.