ಚಿತ್ರದುರ್ಗ: ನವೆಂಬರ್ 18 ರಂದು ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಅರವಿಂದ್ ಗಾರ್ಮೆಂಟ್ಸ್ ಮತ್ತು ವೈಟ್ ವಾಷನ್ ಗಾರ್ಮೆಂಟ್ಸ್ ಗಳ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಧವಳಗಿರಿ ಬಡಾವಣೆಯ 2ನೇ ಹಂತದಲ್ಲಿ ಒಂದಷ್ಟು ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಟ ನಡೆಸಿದ್ದರು.
1. ಶೇಕ್ ಸೈಫುರ್ ರೋಹಮನ್ S/O ತಾರಾ ಮಿಯಾ,
2. ಮೊಹಮ್ಮದ್ ಸುಮನ್ ಹುಸೇನ್ ಅಲಿ S/O ಮೊಹಮ್ಮದ್ ದುಲಾಲ್ ಹುಸೇನ್,
3. ಮಜರುಲ್ S/O ಮಾರುಫ್,
4. ಸನೋವರ್ ಹೊಸೈನ್ S/O ಅರಬ್ ಮಿಯಾ,
5. ಮುಹಮ್ಮದ್ ಸಾಕಿಬ್ ಸಿಕ್ದರ್ C/O ಮುಹಮ್ಮದ್ ಸೆಲಿಮ್ ಸಿಕ್ದರ್,
6. ಅಜೀಜುಲ್ ಶೇಕ್ S/O ರೆಹಮಾನ್ ಶೇಕ್
ಈ ಮೇಲ್ಕಂಡ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಇವರೆಲ್ಲ ಬಾಂಗ್ಲಾ ದೇಶದಿಂದ ನಕಲಿ ದಾಖಲರ, ಸೃಷ್ಟಿಸಿಕೊಂಡು ಬಂದವರು ಎಂಬುದು ತಿಳಿದು ಬಂದಿತ್ತು.
ಅಷ್ಟು ಜನ ಬಾಂಗ್ಲಾದೇಶಕ್ಕೆ ಸೇರಿದ ಪ್ರಜೆಗಳಾಗಿದ್ದು, ಭಾರತಕ್ಕೆ ಬಂದು ಇಲ್ಲಿಯೇ ನೆಲೆಸುವ ಉದ್ದೇಶದಿಂದ ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳ ರಾಜ್ಯಕ್ಕೆ
ಬಂದು, ಕೋಲ್ಕತ್ತ ನಗರದಲ್ಲಿ ನಕಲಿ ಆಧಾರ್ ಕಾರ್ಡ್, ಇತರೆ ದಾಖಲೆಗಳನ್ನು ಮಾಡಿಸಿಕೊಂಡು ಭಾರತದ ವಿವಿಧ
ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಚಿತ್ರದುರ್ಗ ನಗರದಲ್ಲಿ ಕೆಲಸದ
ಉದ್ದೇಶದಿಂದಾಗಿ ಬಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಬಂಧಿತರಿಂದ ನಕಲಿ ಆಧಾರ್ ಕಾರ್ಡ್‍ಗಳು, ಮತದಾರರ ಗುರುತಿನ ಚೀಟಿಗಳು, ಲೇಬರ್ ಕಾರ್ಡ್‍ಗಳು, ಬ್ಯಾಂಕ್ ಪಾಸ್ ಬುಕ್‍ಗಳು, ಪಾನ್ ಕಾರ್ಡ್‍ಗಳು ಹಾಗೂ ಒಂದು ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ದೇಶದ
ಪ್ರಜೆಗಳನ್ನು ಪತ್ತೆ ಮಾಡಿದ ಸಿ.ಇ.ಎನ್. ಪೊಲೀಸ್ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಎನ್.ವೆಂಕಟೇಶ್, ಜಿಲ್ಲಾ ವಿಶೇಷ
ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಗುಡ್ಡಪ್ಪ, ಚಿತ್ರದುರ್ಗ ಕೋಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ದೊಡ್ಡಣ್ಣ, ಶ್ರೀ
ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮುದ್ದುರಾಜ್ ಹಾಗೂ ಸಿಬ್ಬಂದಿಯವರಾದ ಎಎಸ್‍ಐ
ಆರ್.ಈ.ತಿಪ್ಪೇಸ್ವಾಮಿ, ಸಿಹೆಚ್‍ಸಿಗಳಾದ ಆರ್.ಮಧು, ಎನ್.ಕೆಂಚಪ್ಪ, ಸಿದ್ದಲಿಂಗಯ್ಯ ಹಿರೇಮಠ್ ಇವರ ಕಾರ್ಯವನ್ನು
ಪೊಲೀಸ್ ಅಧೀಕ್ಷಕರು, ಶ್ಲಾಘಿಸಿದ್ದಾರೆ.