ಕಳೆದ ಎರಡು ದಿನದ ಹಿಂದೆ ಸಂಸತ್ ಭವನದ ಒಳಗೆ ಇಬ್ಬರು ನುಗ್ಗಿ ದಾಂಧಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ನೀಡಿದ ಪಾಸ್ ನಿಂದಾಗಿ ಆ ಇಬ್ಬರು ಒಳಗೆ ಪ್ರವೇಶ ಪಡೆಯುವುದಕ್ಕೆ ಸುಲಭವಾಗಿತ್ತು. ಇದೀಗ ಭದ್ರತಾ ಲೋಪದ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಸಂಸತ್ ಒಳಗೆ ನುಗ್ಗಿದ ಅದೇ ಆರೋಪಿಗಳು ಇಂದು ಕೂಡ ಸಂಸತ್ ಭವನದ ಒಳಗೆ ನುಗ್ಗಲಿದ್ದಾರೆ. ಅದಕ್ಕೆ ಕಾರಣ ಬೇರೆಯದ್ದೇ ಇದೆ. ಭದ್ರತಾ ಲೋಪದ ಬಗ್ಗೆ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಅಂದಿನ ಘಟನೆಯನ್ನು ಮರು ಸೃಷ್ಠಿ ಮಾಡಲಾಗುತ್ತಿದೆ.
ಈ ಬಾರಿ ಪೊಲೀಸರ ಸಮ್ಮುಖದಲ್ಲಿ ಆರೋಪಿಗಳಾದ ಸಾಗರ್ ಹಾಗೂ ಮನೋರಂಜನ್ ವೀಕ್ಷಕರ ಗ್ಯಾಲರಿಗೆ ನುಗ್ಗಲಿದ್ದಾರೆ. ಈ ಮೂಲಕ ಅಲ್ಲಿನ ಭದ್ರತಾ ಲೋಪ ಹಾಗೂ ಕೆಲ ದೃಶ್ಯಗಳನ್ನು ಮರು ಪರಿಶೀಲನೆ ನಡೆಸುವ ಮೂಲಕ ತನಿಖೆಯನ್ನು ನಡೆಸಲಿದ್ದಾರೆ.
ಇಂದು ಕಲಾಪ ನಡೆಯುತ್ತಿರುವ ಕಾರಣ ಶನಿವಾರ ಅಥವಾ ಭಾನುವಾರ ಆರೋಪಿಗಳನ್ನು ಕರೆದೊಯ್ದು ಭದ್ರತಾ ಲೋಪದ ಪರೀಕ್ಷೆ ನಡೆಸಲಿದ್ದಾರೆ. ಯಾವುದೇ ಅಪರಾಧಗಳ ಪ್ರಕರಣಗಳು ನಡೆದಾಗ ಅದನ್ನು ಮರುಸೃಷ್ಠಿ ಮಾಡಲಾಗುತ್ತದೆ. ಈ ಮೂಲಕ ಅಲ್ಲಿ ಆಗಿರುವ ಲೋಪದೋಷಗಳು ತಿಳಿಯುತ್ತವೆ. ಅದರಂತೆ ಇಲ್ಲಿಯೂ ಮರುಸೃಷ್ಠಿ ಮಾಡಲಾಗುತ್ತಿದೆ. ಇದು ಪೊಲೀಸರಿಗೆ ಸಾಜಷ್ಟು ಸಹಾಯವಾಗಲಿದೆ. ಆರೋಪಿಗಳಿಗೆ ಸಂಬಂಧ ಪಟ್ಟ ಕಡೆಯಲ್ಲೆಲ್ಲಾ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಮರುಸೃಷ್ಠಿ ಮಾಡಿದ ಬಳಿಕ ಗುರುಗ್ರಾಮಕ್ಕೂ ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಾರೆ.