ಚಿಕ್ಕಬಳ್ಳಾಪುರ: ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ್ದಾರೆ. 2019ರಲ್ಲಿ ಕಾಂಗ್ರೆಸ್ ನ ಕುತಂತ್ರದಿಂದ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಸಮ್ಮಿಶ್ರ ಸರ್ಕಾರ ಮಾಡಿದರು. ಆದ್ರೆ ಅಂದು ರಾಜ್ಯದ ಸ್ಥಿತಿ ಹಾಳಾಗಬಾರದು ಎಂಬ ಕಾರಣಕ್ಕೆ ಹದಿನೇಳು ಜನ ರಾಜೀನಾಮೆ ಕೊಟ್ಟು ನಮ್ಮ ಪಕ್ಷ ಸೇರಿದರು. ಮತ್ತೆ ಜನರ ಮುಂದೆ ಹೋಗಿ ಗೆದ್ದು ಬಂದೆವು. ಅವರೆಲ್ಲರು ಕೂಡ ವೀರರು. ರಮೇಶ್ ಜಾರಕಿಹೊಳಿ ಸಮೇತ
ಸಿದ್ದರಾಮಯ್ಯ ಅವರು ಯಾವ ಜೆಡಿಎಸ್ ಅನ್ನು ಬೈದುಕೊಂಡು ಓಡಾಡಿದ್ದರೋ, ಮತ್ತೆ ಅಲ್ಲಿಯೇ ಹೋಗಿ ಅಧಿಕಾರ ಹಿಡಿದಿದ್ದರು. ಸಿದ್ದರಾಮಯ್ಯ ಹೇಳಿದ್ದು ಯಾವುದು ನಿಜವಾಗುವುದಿಲ್ಲ. ನೀವೂ ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತೀರಿ ಎಂಬುದು ಅವತ್ತು ಪ್ರೂವ್ ಆಗಿದೆ. ಕೋವಿಡ್ ಬಂತು ಸ್ವಾಮಿ. ಕಾಂಗ್ರೆಸ್ ಆಡಳಿತದ ಪ್ರದೇಶದಲ್ಲಿ ಎಷ್ಟೋ ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಆದ್ರೆ ನಮ್ಮ ನಾಯಕರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ಕೋವಿಡ್ ಎದುರಿಸಿದ್ದೇವೆ. ಪ್ರಾಣ ಉಳಿಸುವ ಕೆಲಸ ಮಾಡಿದ್ದೀವಿ. ಯಾರಿಗೆ ಕೆಲಸ ಇರಲಿಲ್ಲ ಅವರಿಗೆ ಕೆಲಸ ಕೊಟ್ಟಿದೇವೆ. ಅಲ್ಲಿ ನರೇಂದ್ರ ಮೋದಿ. ಇಲ್ಲಿ ಯಡಿಯೂರಪ್ಪ ಅವರ ಸರ್ಕಾರ ಇಲ್ಲದೆ ಇದ್ದಿದ್ದರೆ ಕೋವಿಡ್ ಸಮಯದಲ್ಲಿ ನರಕಕ್ಕೆ ಕಳುಹಿಸುತ್ತಿದ್ದರು.
ಅನ್ನಭಾಗ್ಯ ಅಂತ ಹೇಳ್ತೀರಿ. ಮೊದಲು 30 ಕೆಜಿ ಸಿಗುತ್ತಾ ಇತ್ತು. ನೀವೂ ಅಧಿಕಾರಕ್ಕೆ ಬಂದ ಮೇಲೆ 7 ಕೇಜಿ, 3 ಕೆಜಿ ಥರ ಕೊಟ್ರಿ. ಅನ್ನಭಾಗ್ಯ ಕೊಟ್ರಿ ಅಂತೀರಲ್ಲ ಯಾಕೆ ಸ್ವಾಮಿ ನೀವೂ ಬರುವುದಕ್ಕೂ ಮುನ್ನ ಅಕ್ಕಿ ನಕೊಡುತ್ತಾ ಇರಲಿಲ್ಲವಾ. ಅನ್ನಭಾಗ್ಯದಲ್ಲಿ ಭ್ರಷ್ಟಚಾರ ನಡೆದಿತ್ತು. ತಿವಾರಿ ಅವರು ವಿಚಾರಣೆ ನಡೆಸಲು ಹೋಗಿದ್ದರು. ಆದ್ರೆ ಅವರ ಸಾವು ಇನ್ನೆಲ್ಲೋ ಆಯ್ತು. ಮರಳು ವಿಚಾರದಲ್ಲೂ ದಂಧೆ ನಡೆದಿದೆ.
ಅನ್ನ ಭಾಗ್ಯ ಚೀಲ ನಿಮ್ಮದು ಆದ್ರೆ ಅಕ್ಕಿ ಮಾತ್ರ ಮೋದಿಯದ್ದು. ಲ್ಯಾಪ್ ಟಾಪ್ ಕೊಡುವುದರಲ್ಲೂ ಹಗರಣ ಮಾಡಿದ್ರಿ. ನಿಮ್ಮದಿ 100% ಕಮಿಷನ್ ಸರ್ಕಾರ. ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತ ಯೋಜನೆ ತಂದಿದ್ದೀವಿ. ಎತ್ತಿನ ಹೊಳೆ ಯೋಜನೆ ಬಗ್ಗೆ ಮಾತನಾಡುತ್ತಾರೆ. ಆದ್ರೆ ಎತ್ತಿನ ಹೊಳೆ ಯೋಜನೆ ಎಲ್ಲಿದೆ ಅಂತಾನೆ ಗೊತ್ತಿಲ್ಲ ಅವರಿಗೆ. ಈ ಭಾಗದ ಜನರಿಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ಮಾಡಿದ್ದೀವಿ. 3 ಸಾವಿರ ಕೋಟಿ ರೂಪಾಯಿ ಕೊಟ್ಟು ಇದೇ ವರ್ಷ ಎತ್ತಿನಹೊಳೆ ನೀರನ್ನು ಹರಿಸುತ್ತೀವಿ ಎಂದಿದ್ದಾರೆ.