Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಪ್ಲೋಮಾ ಡಿಟಿಡಿಎಂ, ಡಿಎಂಸಿಹೆಚ್ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭ

Facebook
Twitter
Telegram
WhatsApp

ಚಿತ್ರದುರ್ಗ,(ಮೇ 20) : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಚಿತ್ರದುರ್ಗದಲ್ಲಿ ಡಿಪ್ಲೊಮಾ ಕೋರ್ಸ್ಗಳಾದ “ಡಿಪ್ಲೊಮಾ ಇನ್‌ಟೂಲ್ ಅಂಡ್ ಡೈ ಮೇಕಿಂಗ್” (ಆಖಿಆಒ) ಮತ್ತು “ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್” (ಆಒಅಊ) ವಿಷಯಗಳಿಗೆ ಪ್ರವೇಶ ಪ್ರಕ್ರಿಯೆಗೆ ಆರಂಭವಾಗಿದೆ. ಪ್ರತಿ ಕೋರ್ಸಗೆ  ಕೇವಲ 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ.

ಪ್ರವೇಶ ಪಡೆಯಲು ಕನಿಷ್ಟ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.  ಕನಿಷ್ಟ 5 ವರ್ಷಗಳ ಕಾಲ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿದ 16 ರಿಂದ 35 ವಯೋಮಿತಿ ಒಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೊದಲ ಬಂದವರಿಗೆ ಮೊದಲ ಅವಕಾಶ ನೀಡಲಾಗುವುದು.

ಸಂಸ್ಥೆಯಲ್ಲಿ ಅತ್ಯಾಧುನಿಕ ಪ್ರಾಯೋಗಿಕ ಉಪಕರಣಗಳು ವಿನ್ಯಾಸಕ್ಕೆ ಅಗತ್ಯ ವಿರುವ ತಂತ್ರಾAಶ, ಗಣಕ ಯಂತ್ರ, ಸಿಎನ್‌ಸಿ ಯಂತ್ರಗಳಿವೆ. ವಿದ್ಯಾರ್ಥಿಗಳಿಗೆ ಹಾಗು ಭೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕ್ಯಾಂಟೀನ್ ವ್ಯವಸ್ಥೆ ಇದೆ. ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ತಾತ್ಕಾಲಿಕ ಹಾಸ್ಟೇಲ್ ವ್ಯವಸ್ಥೆ ಇದೆ.

ಚಿತ್ರದುರ್ಗ ನಗರದಿಂದ ಬಸ್ ಸೌಕರ್ಯವಿದೆ.  ಎಸ್.ಎಸ್.ಎಲ್.ಸಿ. ಬಳಿಕ ವೃತ್ತಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಡಿಪ್ಲೊಮಾ ಕೋರ್ಸಗಳಲ್ಲಿ ತರಬೇತಿ ನೀಡಿವುದರೊಂದಿಗೆ ಉದ್ಯೋಗದ ಖಾತರಿ ಸಹ ನೀಡಲಾಗುವುದು. ಮೊದಲ ಮೂರೂ ವರ್ಷಗಳ ಕಾಲ ನಮ್ಮ ಕೇಂದ್ರದಲ್ಲಿ ಸರ್ವಾಂಗೀಣ ತರಬೇತಿ ಕೊಡಲಾಗುವುದು.

ನಾಲ್ಕನೆ ವರ್ಷ ಕಡ್ಡಾಯವಾಗಿ ಕೈಗಾರಿಕಾ ತರಬೇತಿಗಾಗಿ ಕೈಗಾರಿಕೆಗಳಿಗೆ ನಿಯೋಜನೆಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಪಡೆದ ವಿಧ್ಯಾರ್ಥಿಗಳಿಗೆ ಕೈಗಾರಿಕೆ, ಸಾಫ್ಟವೇರ್, ಹಾರ್ಡವೇರ್ ಮತ್ತು ಸರ್ವೀಸ್ ಸೆಕ್ಟರ್‌ಗಳಲ್ಲಿ (ರಾಷ್ಟೀಯ ಮತ್ತು ಬಹುರಾಷ್ಟೀಯ) ಸೇರಲು ಅತ್ಯಧಿಕ ಅವಕಾಶಗಳಿವೆ.  ಉನ್ನತ ವಿದ್ಯಾಭ್ಯಾಸ ಮಾಡಲು ಆಸಕ್ತಿ ಇರುವವರಿಗೆ ನೇರವಾಗಿ ಇಂಜಿನಿಯರಿಂಗ್ ಮೂರನೇ ಸೆಮಿಸ್ಟರಗೆ  ಪ್ರವೇಶ ಪಡೆಯಬಹುದು. ಆಸಕ್ತ ವಿದ್ಯಾರ್ಥಿಗಳು ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಪಡೆದು ದಾಖಲಾತಿ ಪಡೆದು ಕೊಳ್ಳಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ರಸ್ತೆ, ಕಣಿವೆ ಮಾರಮ್ಮ ದೇವಸ್ಥಾನದ ಹಿಂಭಾಗ, ಕುಂಚಿಗನಹಾಳ್ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿಬಹದುದು. ದೂರವಾಣಿ ಸಂಖ್ಯೆ 6362615889, 9826632362, 9481866855 ಗೆ ಸಂಪರ್ಕಿಸಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತ ನೋಡಿದ ಭಯಕ್ಕೆ ಸ್ಟ್ರೋಕ್ ಆಗಿ ನಟಿ ಪವಿತ್ರಾ ಸಾವು : ಜೊತೆಗಿದ್ದ ನಟ ಹೇಳಿದ್ದೇನು..?

ಭವಿಷ್ಯದಲ್ಲಿ ಒಳ್ಳೆಯ ಪೋಷಕ ನಟಿಯಾಗುವ ಎಲ್ಲಾ ಲಕ್ಷಣವನ್ನು ಹೊತ್ತುಕೊಂಡಿದ್ದವರು ಪವಿತ್ರಾ ಜಯರಾಂ. ಅದರಲ್ಲೂ ಸೀರಿಯಲ್ ನ ಖಳನಟಿಗೆ ಹೇಳಿ ಮಾಡಿಸಿದಂತಿದ್ದರು‌. ತ್ರಿಯನಿ ಧಾರಾವಾಹಿಯಲ್ಲಿ ಖಳನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಅವರು ಕಾರು ಅಪಘಾತದಿಂದ

CBSC 12ನೇ ತರಗತಿಯಲ್ಲಿ ಬೆಂಗಳೂರಿನ ಟ್ಯಾಂಕರ್ ಚಾಲಕನ ಮಗಳ ಸಾಧನೆ ಹೇಗಿದೆ ಗೊತ್ತಾ..?

ಬೆಂಗಳೂರು: ಸಿಬಿಎಸ್ಸಿ ಸಿಲಬಸ್ ನ ಸೆಕೆಂಡ್ ಪಿಯುಸಿ ರಿಸಲ್ಟ್ ನಿನ್ನೆ ಘೋಷಣೆಯಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರಿನಲ್ಲೂ ಫಲಿತಾಂಶ ಕಡಿಮೆ ಬಂದಿದೆ. ಅದರಲ್ಲಿ ಟ್ಯಾಂಕರ್ ಚಾಲಕನ ಮಗಳು ಅತ್ಯುತ್ತಮ ಅಂಕ ಪಡೆದಿರುವುದು

ರಾತ್ರಿ ವೇಳೆ ಅನ್ನದ ಬದಲು ಬರೀ ಚಪಾತಿ ತಿನ್ನುತ್ತಿದ್ದೀರಾ?

ಸುದ್ದಿಒನ್ : ಇತ್ತೀಚೆಗೆ, ಸ್ಥೂಲಕಾಯತೆಯು ಅನೇಕ ಯುವಜನರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕಾಗಿ ಅವರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಾರೆ. ಅದಕ್ಕಾಗಿ ರಾತ್ರಿ ಅನ್ನ ತಿನ್ನುವುದನ್ನು ಬಿಟ್ಟು ಹೆಚ್ಚು ಚಪಾತಿ ತಿನ್ನತೊಡಗುತ್ತಿದ್ದಾರೆ. ಆದರೆ ಇದರಿಂದ

error: Content is protected !!