ಮೈಸೂರು: ಇಂದು ನಾಡಹಬ್ಬ ದಸರಾ ಜಂಬೂ ಸವಾರಿ ಆರಂಭವಾಗಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿಯೂ ಸರಳ ದಸರಾ ಮಾಡಲಾಗುತ್ತಿದೆ. ಕೊರೊನಾ ಹರಡುವ ಭಯ ಎಲ್ಲರನ್ನು ಕಾಡುತ್ತಿದೆ. ಹೀಗಾಗಿ ಅರಮನೆ ಆವರಣಕ್ಕೆ ಈ ಬಾರಿಯ ದಸರಾ ಕೂಡ ಸೀಮಿತವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿಧ್ವಜಕ್ಕೆ ಸಂಜೆ 4.32 ರ ಮೀನ ಲಗ್ನದಲ್ಲಿ ಪೂಜೆ ಸಲ್ಲಿಸಲಾಯಿತು. 5.25ಕ್ಕೆ ಚಿನ್ನದ ಅಂಬಾರಿಗೆ ಪೂಜೆ ಸಲ್ಲಿಸಿ, ಹೂವನ್ನ ಹಾಕಿದ ಮೇಲೆ ಜಂಬೂ ಸವಾರಿ ಮೆರವಣಿಗೆ ಆರಂಭವಾಯ್ತು.
ಈ ಬಾರಿಯೂ ಅಭಿಮನ್ಯುನೆ ಚಾಮುಂಡೇಶ್ವರಿ ತಾಯಿಯ ಅಂಬಾರಿ ಹೊತ್ತಿದ್ದಾನೆ. 750 ಕೆಜಿ ಅಂಬಾರಿಯನ್ನ ಹೊತ್ತಿದ್ದಾನೆ. ಕೊರೊನಾ ಹಿನ್ನೆಲೆ ಸರಳವಾಗಿ ನಡೆಯುತ್ತಿರುವ ದಸರಾ ಕಾರ್ಯಕ್ರಮದಲ್ಲಿ ಈ ಬಾರಿಯೂ ಸಾರ್ವಜನಿಕರಿಗೆ ಅವಕಾಶವಿಲ್ಲ.. ಅರಮನಸ ಆವರಣದಲ್ಲೇ ಸರಳ ದಸರಾ ನಡೆಯುತ್ತಿದೆ. ಬೀದಿ ಬೀದಿಗಳಲ್ಲಿ ಸಾಗುತ್ತಿದ್ದ ಅಂಬಾರಿ ಮೆರವಣಿಗೆ ಈಗ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ. ಇಂತಿಷ್ಟು ಮಂದಿಗೆ ಮಾತ್ರ ದಸರಾ ವೈಭವ ನೋಡಲು ಅವಕಾಶ ಮಾಡಿಕೊಡಲಾಗಿದರ. ಸರಳವಾಗಿದ್ದರು, ಯಾವುದೇ ಸಂಪ್ರದಾಯ ಮಿಸ್ ಆಗದ ಹಾಗೇ ನೋಡಿಕೊಳ್ಳಲಾಗುತ್ತಿದೆ.