2023 ಕಳೆದು 2024ಕ್ಕೆ ಎಲ್ಲರೂ ಕಾಲಿಟ್ಟಿದ್ದಾರೆ. ಈ ಹೊಸ ವರ್ಷದ ಸಂಭ್ರಮವನ್ನು ಎಲ್ಲೆಡೆ ಭರ್ಜರಿಯಿಂದ ಸ್ವಾಗತ ಮಾಡಲಾಗಿದೆ. ಮನೆಯಲ್ಲಿ ಪಾರ್ಟಿ ಮಾಡುವವರು, ಪಬ್, ರೆಸ್ಟೋಬಾರ್ ಗಳಲ್ಲಿ ಪಾರ್ಟಿ ಮಾಡುವ ಮೂಲಕ ಈ ವರ್ಷವನ್ಬು ಬರಮಾಡಿಕೊಂಡಿದ್ದಾರೆ. ಹೊಸ ವರ್ಷ ಅಂದ ಕೂಡಲೇ ಮದ್ಯಪಾನ ಹೆಚ್ಚಾಗಿನೇ ಖರ್ಚಾಗುತ್ತದೆ. ಈ ಮೂಲಕ ಈ ವರ್ಷ ಸರ್ಕಾರಕ್ಕೆ ಕಲೆಕ್ಟ್ ಆಗಿರುವುದು ಎಷ್ಟು ಕೋಟಿ ಗೊತ್ತಾ..?
ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ 1072 ಕೋಟಿ ರೂಪಾಯಿ ಆದಾಯ ರಾಜ್ಯ ಸರ್ಕಾರಕ್ಕೆ ಬಂದಿದೆ. ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೂ IML ಲಿಕ್ಕರ್‌ನಲ್ಲಿ ಒಟ್ಟು 22.2 ಲಕ್ಷದ ಬಾಕ್ಸ್ ಮಾರಾಟವಾಗಿದೆ. 22.2 ಲಕ್ಷ ಬಾಕ್ಸ್ ಸೆಲ್ ಆಗಿರುವುದರಿಂದ ಒಟ್ಟು 900 ಕೋಟಿ ರೂಪಾಯಿ ಆದಾಯ ಬಂದಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಯರ್ 14.೦7 ಲಕ್ಷ ಬಾಕ್ಸ್ ಸೇಲ್ ಮಾಡಲಾಗಿದೆ. ಬಿಯರ್ ಮಾರಾಟದಿಂದಲೇ ಸುಮಾರು 170 ಕೋಟಿರೂಪಾಯಿ ಆದಾಯ ಸರ್ಕಾರದ ಬೊಕ್ಕಸ ಸೇರಿದೆ.
ನಿನ್ನೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊಸ ವರ್ಷಕ್ಕೆ ರಸ್ತೆಗಳೆಲ್ಲಾ ಅಲಂಕಾರಗೊಂಡಿದ್ದವು. ಜಗಮಗಿಸುವ ಕಲರ್ ಫುಲ್ ಬೆಳಕಿನೊಂದಿಗೆ ರಾರಾಜಿಸುತ್ತಿತ್ತು. ಯುವ ಸಮುದಾಯ ಹೊಸ ವರ್ಷ ಸಗವಾಗತಿಸುವುದಕ್ಕೆ ಹೊಸ ಹುರುಪಿನಿಂದ ಕಾದು ಕುಳಿತಿದ್ದರು. ಬೆಂಗಳೂರಿನಲ್ಲಂತು ಬ್ರಿಗೇಡ್ ರೋಡ್ ಭರ್ತಿಯಾಗಿತ್ತು. ಮದ್ಯರಾತ್ರಿಯವರೆಗೂ ಪಾರ್ಟಿ ಮಾಡಿ, ಎಂಜಾಯ್ ಮಾಡಿದರು. ಪೊಲೀಸರು ಕೂಡ ಇಂಥ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಯಾರಿಗೂ ಸ್ವಲ್ಪವೂ ತೊಂದರೆಯಾಗದಂತೆ ಎಚ್ಚರವಹಿಸಿ, ಸುರಕ್ಷತೆ ಕಾಪಾಡಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಲೇಬೇಕು.