ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸತತ ಒಂದೂವರೆ ವರ್ಷಗಳ ಕಾಲ ಹೋರಾಡಿ ಕಡೆಗೂ ಜಯಗಳಿಸಿಕೊಂಡ ಪಂಜಾಬ್ ರೈತರು ಇದೀಗ ರಾಜಕೀಯ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಪಂಜಾಬ್ ರೈತರು ಒಗ್ಗೂಡಿದ್ದು, ರಾಜಕೀಯ ಪಕ್ಷವನ್ನ ಘೋಷಿಸಿವೆ. ಸಂಯುಕ್ತ ಸಮಾಜ ಮೋರ್ಚಾ ಎಂಬ ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.
22 ರೈತ ಸಂಘಟನೆಗಳು ಈ ಪಕ್ಷಕ್ಕೆ ಸೇರಿವೆ. ಈ ಕುರಿತು ರೈತ ಸಂಘಟನೆಗಳು ಪ್ರತಿಕ್ರಿಯೆ ನೀಡಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುತ್ತೆ. ಪಂಜಾಬ್ ನ 117 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯುವಂತೆ ಆಗ್ರಹಿಸಿ ಮಾಡಿದ ಹೋರಾಟ ಯಶಸ್ವಿಯಾಗಿದೆ. ಬಿಸಿಲು, ಮಳೆ, ಗಾಳಿ ಎನ್ನದೇ ಹೋರಾಡಿದ ರೈತರಿಗೆ ಕೇಂದ್ತ ಸರ್ಕಾರ ಕಡೆಗೂ ಮಣಿದಿತ್ತು. ಇದೀಗ ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವುದು, ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ರಾಜಕೀಯ ಪಕ್ಷಗಳಿಗೆ ಭಯ ಮೂಡಿಸಿದೆ. ರೈತ ಸಂಘಟನೆಗಳ ಈ ನಿರ್ಧಾರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.