ಬೆಂಗಳೂರು : ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ 2022 ಹರಾಜಿನಲ್ಲಿ ಒಟ್ಟು 1214 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಎರಡು ಹೊಸ ತಂಡಗಳು (ಲಕ್ನೋ, ಅಹಮದಾಬಾದ್) ಸೇರಿದಂತೆ ಒಟ್ಟು 10 ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಹರಾಜಿನಲ್ಲಿ ಹೆಸರು ನೋಂದಾಯಿಸಲು ಜನವರಿ 20 ರ ಗಡುವು ಮುಗಿದಿರುವುದರಿಂದ ಕಣದಲ್ಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಶನಿವಾರ ಬಿಡುಗಡೆ ಮಾಡಿದೆ.
ಹರಾಜಿನಲ್ಲಿ ಭಾಗವಹಿಸುವ 1214 ಆಟಗಾರರ ಪೈಕಿ 896 ಭಾರತೀಯ ಕ್ರಿಕೆಟಿಗರು ಮತ್ತು 318 ವಿದೇಶಿಗರು. ಇವರಲ್ಲಿ, 270 ಕ್ಯಾಪ್ ಡ್ (ರಾಷ್ಟ್ರೀಯ ತಂಡಕ್ಕಾಗಿ ಆಡಿದವರು), 903 ಅನ್‌ಕ್ಯಾಪ್ ಡ್ (ರಾಷ್ಟ್ರೀಯ ತಂಡಕ್ಕಾಗಿ ಆಡದವರು), ಮತ್ತು 41 ಅಸೋಸಿಯೇಟ್ ಆಟಗಾರರು.
ಅತಿ ಹೆಚ್ಚು ವಿದೇಶಿ ಆಟಗಾರರು ಆಸ್ಟ್ರೇಲಿಯಾ (59), ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (48), ಶ್ರೀಲಂಕಾ (36), ಇಂಗ್ಲೆಂಡ್ (30), ನ್ಯೂಜಿಲೆಂಡ್ (29) ಮತ್ತು ಅಫ್ಘಾನಿಸ್ತಾನ (20) ನೇಪಾಳ (15), ಯುಎಸ್‌ಎ (14), ನಮೀಬಿಯಾ (5), ಒಮನ್ (3), ಭೂತಾನ್ (1), ಯುಎಇ (1), ನೆದರ್‌ಲ್ಯಾಂಡ್ಸ್ (1) ಮತ್ತು ಸ್ಕಾಟ್‌ಲ್ಯಾಂಡ್‌ನಂತಹ ಸಹವರ್ತಿ ರಾಷ್ಟ್ರಗಳ ಆಟಗಾರರು ಸಹ ಹರಾಜಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.
ವಿದೇಶಿ ಆಟಗಾರರು ಸೇರಿದಂತೆ ಒಟ್ಟು 49 ಆಟಗಾರರು 2 ಕೋಟಿ ಬೇಸ್ ಪ್ರೈಸ್ ವಿಭಾಗದಲ್ಲಿದ್ದರೆ, ಶ್ರೇಯಸ್ ಅಯ್ಯರ್, ಶಿಖರ್ ಧವನ್ ಸೇರಿದಂತೆ ಭಾರತದ 17 ಆಟಗಾರರು ಈ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಈ ವಿಭಾಗದಲ್ಲಿ ಅಶ್ವಿನ್, ಚಾಹಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಾಟಿ ರಾಯುಡು, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕ್ರೆ, ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ವಾರ್ನರ್, ಡಿಕಾಕ್ (ದಕ್ಷಿಣ ಆಫ್ರಿಕಾ), ಡಿ ಪ್ಲೆಸಿಸ್, ರಬಾಡ, ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್).ವಿದೇಶಿ ಆಟಗಾರರು ಇದ್ದಾರೆ.
1.5 ಕೋಟಿ ಬೇಸ್ ಪ್ರೈಸ್ ವಿಭಾಗದಲ್ಲಿ 20 ಆಟಗಾರರು (ವಿದೇಶಿ ಆಟಗಾರರು ಸೇರಿದಂತೆ) ಮತ್ತು ಒಂದು ಕೋಟಿ ಬೇಸ್ ಪ್ರೈಸ್ ವಿಭಾಗದಲ್ಲಿ 31 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ವಿದೇಶಿ ಕ್ರಿಕೆಟಿಗರಾದ ಫಿಂಚ್, ಬೈರ್‌ಸ್ಟೋ, ಮಾರ್ಗನ್, ಡೇವಿಡ್ ಮಲನ್, ಹೆಟ್‌ಮೈರ್, ಪೂರನ್, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್ ಟಾಪ್ 50 ವಿಭಾಗದಲ್ಲಿ ದೇಶಿಯ ತಾರೆಗಳಿದ್ದಾರೆ. ಮತ್ತು ಡಸ್ಸೆನ್ ಅವರಂತಹ ವಿದೇಶಿ ಆಟಗಾರರಿದ್ದಾರೆ.