ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದನ್ನ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಲೆ ಬಂದಿದ್ದಾರೆ. ನಿನ್ನೆಯಷ್ಟೇ ಸಚಿವ ಆರ್ ಅಶೋಕ್ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದರು. ಮೇಕೆದಾಟುಗೆ ಮೇಕೆ ಮಾಂಸ ತಿನ್ನಲು ಹೋಗ್ತಿದ್ದಾರೆ. ಅವರಿಗೆ ಮಾಂಸವೂ ಸಿಗಲ್ಲ, ಮೇಕೆಯೂ ಸಿಗಲ್ಲ ಎಂದಿದ್ದರು.
ಇದೀಗ ಸಚಿವ ಅಶೋಕ್ ಅವರ ಮಾತಿಗೆ ಡಿಕೆಶಿ ತಿರುಗೇಟು ನೀಡಿದ್ದು, ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೆ. ಇದು ಅಶೋಕಣ್ಣನಿಗೆ ಅರಿವಿಲ್ಲ. ಯಾರಿಗೂ ಮೇಕೆ ಮಾಂಸ ತಿನ್ನಿಸೋಕೆ ಪ್ರಯತ್ನಿಸಿಲ್ಲ. ನಾವೂ ಜನರಿಗೆ ನೀರು ಕೊಡ್ಬೇಕು ಅಂತ ಬಯಸ್ತಿದ್ದೇವೆ.ವಇದು ಕುಡಿಯುವ ನೀರಿನ ಯೋಜನೆ ಬೆಂಬಲ ಕೊಡಿ ಎಂದಿದ್ದಾರೆ.
ಇತ್ತ ಡಿಕೆಶಿಗೆ ಸಚಿವ ಅಶೋಕ್ ಕೂಡ ತಿರುಗೇಟು ನೀಡಿದ್ದು, ಚಾಟ್ ಮಸಾಲೆ ತೆಗೆದುಕೊಂಡು ಮೇಕೆದಾಟುಗೆ ಹೋಗ್ತಿದ್ದಾರೆ. ಆರು ವರ್ಷ ಆಡಳಿತದಲ್ಲಿದ್ದಾಗ ಏನು ಮಾಡಿದ್ರು. ಕೋಳಿ ಕೇಳಿ ಮಸಾಲೆ ಅರಿಬೇಕಾ ಎಂದಿದ್ದ ಡಿಕೆಶಿ ಮಾತಿಗೆ ನಂಗೆ ಯಾವ ಮಸಾಲೆಯೂ ಬೇಡ ಎಂದ ಅಶೋಕ್ ಟಾಂಗ್ ಕೊಟ್ಟಿದ್ದಾರೆ.