ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ನವೆಂಬರ್. 02 :
2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಗಿನವರಿಗೆ ಪಕ್ಷದ ಟಿಕೇಟನ್ನು ನೀಡದೆ ಸ್ಥಳೀಯರಿಗೆ ಟಿಕೇಟನ್ನು ನೀಡುವುದರ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿದೆ ಎಂದು 2009ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಬಿ.ತಿಪ್ಪೇಸ್ವಾಮಿ (ಜೆ.ಜೆ.ಹಟ್ಟಿ) ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ಮಾಡಿಕೊಂಡು ಬಂದಿರುವ ನಾನು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದೇನೆ, 2009ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಅಂದು ಈ ಕ್ಷೇತ್ರದಲ್ಲಿ 4 ಜನ ಸಚಿವರು ಇಬ್ಬರು ಎಂ.ಎಲ್.ಎಗಳು, ಇದ್ದು, ನಮ್ಮ ಪಕ್ಷದಲ್ಲಿ ಹಲವಾರು ಜನತೆ ಪಕ್ಷವನ್ನು ಬಿಟ್ಟು ಹೋಗಿದ್ದರಿಂದ ನನಗೆ ಸೋಲಾಯಿತು ಅದರಲ್ಲೂ ಸಹಾ 2.50 ಲಕ್ಷ ಮತವನ್ನು ಪಡೆದಿದೆ ಎಂದರು.
ಕಳೆದ 2-3 ಬಾರಿ ಲೋಕಸಭಾ ಚುನಾವಣೆಯಲ್ಲಿ ಹೂರಗಿನವರಿಗೆ ಅವಕಾಶವನ್ನು ನೀಡಲಾಗಿದ್ದು ಸ್ಥಳಿಯರನ್ನು ಕಡೆಗಣಿಸಲಾಗಿದೆ. ಈಗÀ ಕ್ಷೇತ್ರದಲ್ಲಿ ಹೊರಗಿನವರು ಗೆದ್ದರು ಸಹಾ ಯಾವುದೇ ರೀತಿಯ ಅಭೀವೃದ್ದಿ ಕಾರ್ಯವನ್ನು ಮಾಡಿಲ್ಲ, 2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ನನ್ನ ಬಗ್ಗೆ ಒಲವು ಇದ್ದರೂ ಸಹಾ ನಮ್ಮ ಪಕ್ಷದವರಿಂದ ನನಗೆ ಟೀಕೇಟ್ ತಪ್ಪಿತು.
ಆಗ ಚಂದ್ರಪ್ಪರವರಿಗೆ ಟಿಕೇಟ್ ನೀಡುವುದರ ಮೂಲಕ ಅವರನ್ನು ಗೆಲ್ಲಿಸಲಾಯಿತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಕಾಂಗ್ರೆಸ್‍ನ ಗ್ಯಾರೆಂಟಿಗಳು ಜನ ಪ್ರಯತೆಯನ್ನು ಹೊಂದಿದ್ದು ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಜನ ಸದಸ್ಯರಾಗಲಿದ್ದಾರೆ ಎಂದರು.
ಲೋಕಸಭಾ ಸದಸ್ಯರಾದವರಿಗೆ ತಮ್ಮದೇ ಆದ ಜವಾಬ್ದಾರಿಗಳು ಇವೆ, ಜಿಲ್ಲೆಯ ಜೀವನಾಡಿಯಾದ ಅಪ್ಪರ್ ಭದ್ರಾ ಯೋಜನೆ, ದಾವಣಗೆರೆ-ತುಮಕೂರು ನೇರ ರೈಲ್ವೆ ಮಾರ್ಗ ತುಂಗಾ ಭದ್ರಾ ಹಿನ್ನೀರು ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಕೆಲಸ ಮಾಡಬೇಕಿದೆ ಆದರೆ ಇದುವರೆವಿಗೂ ಗೆದ್ದ ಯಾವ ಲೋಕಸಭಾ ಸದಸ್ಯರು ಸಹಾ ಇದರ ಬಗ್ಗೆ ಕೆಲಸವನ್ನು ಮಾಡಿಲ್ಲ, ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ತರುವುದರ ಮೂಲಕ ಅನುಷ್ಠಾನವನ್ನು ಮಾಡಿಸಬೇಕಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೂರಗಿನಿಂದ ತಂದು ಚುನಾವಣೆಯಲ್ಲಿ ಗೆಲ್ಲಿಸಿದ ಸದಸ್ಯರಿಂದ ಚಿತ್ರದುಗ್ ಯಾವುದೇ ಅಭೀವೃದ್ದಿಯನ್ನು ಕಂಡಿಲ್ಲ, ಈ ಹಿನ್ನಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯವಾಗಿ ಇರುವವರೆಗು ಪಕ್ಷದ ಟೀಕೇಟನ್ನು ನೀಡುವುದರ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮಡಿಲಿಗೆ ತರಬೇಕಿದೆ ಎಂದು ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಬರ ಎಂದು ಘೋಷಣೆ ಮಾಡಿದೆ ಈ ಹಿನ್ನಲೆಯಲ್ಲಿ ಇಲ್ಲಿನ ರೈತರಿಎಗ ಹೆಚ್ಚಿನ ರೀತಿಯ ಅನುಕೂಲವನ್ನು ಮಾಡಿಕೊಡಬೇಕಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜನ ಖರ್ಗೆ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಹೆಚ್ಚಿನ ರೀತಿಯಲ್ಲಿ ಒತ್ತು ನೀಡುವುದರ ಮೂಲಕ ರೈತರಿಗೆ ನರವಾಗಬೇಕಿದೆ ಎಂದು ಒತ್ತಾಯಿಸಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ನನಗೆ ಟೀಕೇಟ್ ಸಿಗುವುದರಲ್ಲಿತ್ತು.
ಆದರೆ ನಮ್ಮವರೆ ನನಗೆ ಮೋಸ ಮಾಡಿ ಅದನ್ನು ತಪ್ಪಿಸಿದರು, ಇದ್ದಲ್ಲದೆ ಎಂಎಲ್‍ಸಿ ಸ್ಥಾನವೂ ಸಹಾ ನನಗೆ ಲಭ್ಯವಾಗುತ್ತಿತು ಆದನ್ನು ಸಹಾ ನಮ್ಮ ಪಕ್ಷದವರೇ ಮೋಸದಿಂದ ತಪ್ಪಿಸಿದ್ದಾರೆ, ಇದರೊಂದಿಗೆ ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲು ನಮ್ಮ ಮುಖಂಡರು ಸಿದ್ದರಿದ್ದರು ಅದನ್ನು ಸಹಾ ನಮ್ಮವರೇ ತಪ್ಪಿಸಿದ್ದಾರೆ ಇಷ್ಟೇಲ್ಲಾ ನೋವನ್ನು ನಾನು ಸಹಿಸಿಕೊಂಡಿದ್ದೇನೆ ಅಲ್ಲದೆ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಕೆಲಸವನ್ನು ಮಾಡುವಂತೆ ಪಕ್ಷದ ವರಿಷ್ಠರು ಸೂಚನೆಯನ್ನು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ನಾನು ಈಗಾಗಲೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸವನ್ನು ಮಾಡುವುದರ ಮೂಲಕ ಮತದಾರರನ್ನು ಬೇಟಿ ಮಾಡಿ ಮತಯಾಚನೆಯನ್ನು ಮಾಡುತ್ತಿದ್ದೇನೆ ಮತದಾರರು ಸಹಾ ಒಲವನ್ನು ತೋರಿಸುತ್ತಿದ್ದಾರೆ ಏನೇ ಆದರೂ ಸಹಾ ಈ ಬಾರಿ ಲೋಕಸಭಾ ಚುನಾವಣೆಯ ಟೀಕೇಟ್ ಸ್ಥಳಿಯರಿಗೇ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 12.50 ಲಕ್ಷ ಮತದಾರರಿದ್ದು ಇದರಲ್ಲಿ 8.50 ಲಕ್ಷ ಎಸ್.ಸಿ. ಜನಾಂಗದವರಿದ್ದು, ಇದರಲ್ಲಿ 4.50 ಲಕ್ಷ ಎಡ ಸಮುದಾಯವರಿದ್ದಾರೆ ಈ ಭಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಐದು ಜನ ಶಾಸಕರಿದ್ಧಾರೆ ಓರ್ವ ಮಂತ್ರಿಗಳಿದ್ದಾರೆ. ಪಕ್ಷದ ಕಾರ್ಯಕರ್ತರು ಹುಮ್ಮನಿಸಿಂದ ಇದ್ದಾರೆ. ಈ ಹಿನ್ನಲೆಯಲ್ಲಿ ಈ ಭಾರಿ ಸ್ಥಳಿಯರಿಗೆ ಟಿಕೇಟ್‍ನ್ನು ನೀಡುವಂತೆ ತಿಪ್ಪೇಸ್ವಾಮಿ ಪಕ್ಷದ ಮುಖಂಡರನ್ನು ಒತ್ತಾಯಿಸಿದ್ದಾರೆ.
ಗೋಷ್ಟಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಲಿಡ್ಕರ್ ನಿಗಮದ ಮಾಜಿ ಅಧ್ಯಕ್ಷ ಓ.ಶಂಕರ್, ಆಶ್ವಕ್ ಆಲಿ, ಉಮೇಶ್, ಪರಮೇಶ್, ರಾಜು, ಶಿವಮೂರ್ತಿ, ಪ್ರಕೃದ್ದೀನ್, ನಯಾಜ್, ಅಬ್ದುಲ್, ಚಂದ್ರಣ್ಣ, ಬಾಷಾ, ಪ್ರಕಾಶ್, ರಮೇಶ್ ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.