Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ ನಾಮಪತ್ರ ಹಿಂಪಡೆದ 14 ಅಭ್ಯರ್ಥಿಗಳು: ಒಟ್ಟು 76 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಏ.24): ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಏ.24 ರಂದು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 90 ಅಭ್ಯರ್ಥಿಗಳ ಪೈಕಿ, 14 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಹಿಂಪಡೆದಿದ್ದಾರೆ. ಒಟ್ಟು 76 ಅಭ್ಯಥಿಗಳು ಅಂತಿಮ ಕಣದಲ್ಲಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 12 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಜಿ.ತಿಪ್ಪೇಸ್ವಾಮಿ, ವೈ.ಹೆಚ್.ಸುಜಯ ಕುಮಾರ್ ನಾಮಪತ್ರ ಹಿಂಪಡೆದಿದ್ದಾರೆ.
ಅಂತಿಮವಾಗಿ ಭಾರತೀಯ ಜನತಾ ಪಕ್ಷದ ಎಸ್.ತಿಪ್ಪೇಸ್ವಾಮಿ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಎನ್.ವೈ.ಗೋಪಾಲಕೃಷ್ಣ, ಜಾತ್ಯಾತೀತ ಜನತಾ ದಳದ ವೀರಭದ್ರಪ್ಪ, ಬಹುಜನ ಸಮಾಜವಾದಿ ಪಕ್ಷದ ಎಮ್.ಓ. ಮಂಜುನಾಥ ಸ್ವಾಮಿ ನಾಯಕ, ಆಮ್ ಆದ್ಮಿ ಪಕ್ಷದ ಎಸ್.ಟಿ.ಹರೀಶ್ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ, ಪಕ್ಷೇತರ ಅಭ್ಯರ್ಥಿಗಳಾದ ಎನ್.ಮಲ್ಲಯ್ಯ ಸ್ವಾಮಿ, ಓ.ಗೋವಿಂದ, ಕೆ.ಪಿ.ಹರೀಶ್ ಕುಮಾರ್, ಟಿ.ಶಶಿಕುಮಾರ್ ಸೇರಿದಂತೆ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚಳ್ಳಕೆರೆ ವಿಧಾನ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 7 ಅಭ್ಯರ್ಥಿಗಳ ಪೈಕಿ ಯಾರು ನಾಮಪತ್ರ ಹಿಂಪಡೆದಿಲ್ಲ. ಅಂತಿಮವಾಗಿ ಭಾರತೀಯ ಜನತಾ ಪಕ್ಷದ ಅನಿಲ್ ಕುಮಾರ್.ಆರ್, ಆಮ್ ಆದ್ಮಿ ಪಕ್ಷದ ಮಾರಕ್ಕ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಟಿ.ರಘುಮೂರ್ತಿ, ಜಾತ್ಯಾತೀತ ಜನತಾ ದಳದ ರವೀಶ್‍ಕುಮಾರ್.ಎಂ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭೂಜರಾಜ.ಸಿ, ಪಕ್ಷೇತರ ಅಭ್ಯರ್ಥಿಗಳಾದ ಅಂಜಮ್ಮ, ಕೆ.ಟಿ.ಕುಮಾರಸ್ವಾಮಿ ಕಣದಲ್ಲಿ ಇದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 23 ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳಾದ ಕಾಮ್ರಾನ್ ಅಲಿ ಕೆ.ಎಸ್ ಹಾಗೂ ಟಿ.ಕೆ.ಬಸವರಾಜ್ ನಾಮಪತ್ರ ಹಿಂಪಡೆದಿದ್ದಾರೆ.

ಅಂತಿಮವಾಗಿ ಆಮ್ ಆದ್ಮಿ ಪಕ್ಷದ ಬಿ.ಈ.ಜಗದೀಶ್,  ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ,  ಬಹುಜನ ಸಮಾಜ ಪಕ್ಷದ ಪ್ರಕಾಶ್.ಎನ್, ಜಾತ್ಯಾತೀತ ಜನತಾ ದಳದ ಜಿ.ರಘು ಆಚಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕೆ.ಸಿ.ವೀರೇಂದ್ರ ಪಪ್ಪಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಟಿ.ಚಂದ್ರಣ್ಣ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು, ಸಮಾಜವಾದಿ ಪಕ್ಷದ ಎನ್.ಮಂಜಪ್ಪ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಾಳೇಕಾಯಿ ಶ್ರೀನಿವಾಸ.ಹೆಚ್, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ್, ಆರ್.ಗೋಪಿನಾಥ್, ಜಿ.ಚಿತ್ರಶೇಖರಪ್ಪ, ಪಿ.ಎಸ್.ಪುಟ್ಟಸ್ವಾಮಿ(ಸ್ವಾಮಿ), ಎಂ.ಎ.ಬಸವರಾಜು, ಭೂತರಾಜ.ವಿ.ಎಸ್, ಮೋಹನ್ ಕಮಾರ್.ಆರ್, ಎಂ.ಹೆಚ್.ಶಶಿಧರ್, ಸುರೇಶ್.ಎನ್, ಸೌಭಾಗ್ಯ ಬಸವರಾಜನ್, ಡಾ.ಹೆಚ್.ಕೆ.ಎಸ್.ಸ್ವಾಮಿ ಸೇರಿದಂತೆ ಒಟ್ಟು 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 14 ಅಭ್ಯರ್ಥಿಗಳ ಪೈಕಿ  ಪಕ್ಷೇತರ ಅಭ್ಯರ್ಥಿಗಳಾದ ಬಿ.ಸುಧಾಕರ, ಆರ್.ಧನು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಸುಧಾಕರ್.ಡಿ, ಬಹುಜನ ಸಮಾಜ ಪಕ್ಷದ ಎನ್.ರಂಗಸ್ವಾಮಿ, ಆಮ್ ಆದ್ಮಿ ಪಕ್ಷದ ಕೆ.ಟಿ.ತಿಪ್ಪೇಸ್ವಾಮಿ, ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ, ಜಾತ್ಯಾತೀತ ಜನತಾದಳ ಎಂ.ರವೀಂದ್ರಪ್ಪ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ವಿನಯ್.ಎಸ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಬಿ.ಪುಟ್ಟಲಿಂಗಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಚ್.ಮಹೇಶ್, ಉತ್ತಮ ಪ್ರಜಾಕೀಯ ಪಕ್ಷದ ಈ.ಪಾತಲಿಂಗಪ್ಪ, ಪಕ್ಷೇತರ ಅಭ್ಯರ್ಥಿಗಳಾದ ರಂಗಯ್ಯ.ಎನ್, ಎನ್.ಓ.ರಂಗಸ್ವಾಮಿ, ಬಿ.ಶಶಿಕಲ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 15 ಅಭ್ಯರ್ಥಿಗಳ ಪೈಕಿ  ಪಕ್ಷೇತರ ಅಭ್ಯರ್ಥಿಗಳಾದ ಬಿ.ಶಿವರುದ್ರಪ್ಪ, ಎ.ಎಸ್.ಮಂಜುನಾಥ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬಿ.ಜಿ.ಗೋವಿಂದಪ್ಪ, ಜಾತ್ಯಾತೀತ ಜನತಾ ದಳದ ತಿಪ್ಪೇಸ್ವಾಮಿ.ಎಂ, ಬಹುಜನ ಸಮಾಜ ಪಕ್ಷದ ತಿಮ್ಮಪ್ಪ.ಕೆ, ಆಮ್ ಆದ್ಮಿ ಪಕ್ಷದ ರಾಜು.ಎನ್.ವಿ, ಭಾರತೀಯ ಜತನಾ ಪಕ್ಷದ ಎಸ್.ಲಿಂಗಮೂರ್ತಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್ ತನು ಚಿಕ್ಕಣ ಯಾದವ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಕುಮಾರ್ ಎಸ್ ತುಂಬಿನಕೆರೆ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಗೀತಾಂಜಲಿ, ಗೂಳಿಹಟ್ಟಿ ಡಿ ಶೇಖರ್, ಜಂಗಮ ಸತೀಶ ಬನಸಿಹಳ್ಳಿ, ಡಿ.ಪಾಂಡುರಂಗ ಗರಗ್, ಟಿ.ಮಂಜುನಾಥ, ಶೇಖರ್ ನಾಯ್ಕ್.ಎಂ.ಆರ್. ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಕ್ರಮಬದ್ದಗೊಂಡ 19 ಅಭ್ಯರ್ಥಿಗಳ ಪೈಕಿ  ಪಕ್ಷೇತರ ಅಭ್ಯರ್ಥಿಗಳಾದ ನಿರಂಜನ.ಎ.ಡಿ, ಜಿ.ಈ.ಉಮಾಪತಿ, ತಿಪ್ಪೇಸ್ವಾಮಿ.ಟಿ, ಆಂಜನೇಯ, ಅಪ್ಪಾಜಿ ಎ ಚನ್ನಬಸವಣ್ಣನವರು, ಹನುಮಂತಪ್ಪ.ಬಿ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ, ಜಾತ್ಯಾತೀತ ಜನತಾ ದಳದ ಎಸ್.ಆರ್.ಇಂದ್ರಜೀತ್ ನಾಯ್ಕ್, ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ, ಬಹುಜನ ಸಮಾಜ ಪಕ್ಷದ ಕೆ.ಎನ್.ದೊಡ್ಡಟ್ಟೆಪ್ಪ, ಆಮ್ ಆದ್ಮಿ ಪಕ್ಷದ ಮಾಹಂತೇಶ್.ಸಿ.ಯು, ಸಮಾಜವಾದಿ ಪಕ್ಷದ ಪಿ.ಎಸ್.ಜಯಪ್ಪ, ಜೈ ಮಹಾಭಾರತ್ ಪಕ್ಷದ ಪ್ರಕಾಶ್.ಹೆಚ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಎಸ್.ರಘುವೀರ ವರ್ಮಾ, ಉತ್ತಮ ಪ್ರಜಾಕೀಯ ಪಕ್ಷದ ರಾಜು.ಈ, ಪಕ್ಷೇತರರಾದ ಡಾ.ಎಲ್.ಜಯಸಿಂಹ, ಮಂಜುನಾಥ.ಟಿ, ಮಹೇಶ್ ಕುಮಾರ್.ಎಂ.ಪಿ, ಹನುಮತಪ್ಪ.ಡಿ ಸೇರಿದಂತೆ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!