ವೀಕೆಂಡ್, ಆ ಪಾರ್ಟಿ ಈ ಪಾರ್ಟಿ ಅಂತ ಬಿಯರ್ ಜೊತೆಗೆ ಮಜಾ ಮಾಡುವವರಿಗೆ ಸರ್ಕಾರದಿಂದ ಬಿಗ್ ಶಾಕ್ ಸಿಕ್ಕಿದೆ. ಬಿಯರ್ ಉತ್ಪಾದನೆಯನ್ನು ಸ್ಥಗಿತ ಮಾಡಲು ಯೋಚನೆ ಮಾಡಿದೆಯಂತೆ. ಹೊಸ ವರ್ಷ ಬೇರೆ ಹತ್ತಿರ ಬರುತ್ತಾ ಇದೆ. ಬಿಯರ್ ಗೆ ಹೆಚ್ಚಿನ ಡಿಮ್ಯಾಂಡ್ ಬೇಡಿಕೆ ಬರಲಿದೆ. ಆದರೆ ಸರ್ಕಾರದ ಈ ನಿರ್ಧಾರದಿಂದ ಬಿಯರ್ ಪ್ರಿಯರಿಗೆ ಶಾಕ್ ಆಗಲಿದೆ. ಇದಕ್ಕೆ ಕಾರಣ ಬೇರೆಯೇ ಇರುವ ಬಗ್ಗೆ ಚರ್ಚೆ ಆಗುತ್ತಾ ಇದ್ದರೆ, ಅಬಕಾರಿ ಇಲಾಖೆಯಿಂದ ಬೇರೆಯದ್ದೇ ಕಾತಣ ನೀಡುತ್ತಿದ್ದಾರೆ.
ಮೈಸೂರಿನ 4 ಉತ್ಪಾದನಾ ಕಂಪನಿಗಳಿಗೆ ಬಿಯರ್ ಉತ್ಪಾದನೆಯನ್ನು ಸ್ಥಗಿತ ಮಾಡುವಂತರ ಆದೇಶ ನೀಡಿದೆಯಂತೆ. ಮೈಸೂರು ಬಿಯರ್ ಉತ್ಪಾದನೆ ಕಂಪನಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಸರ್ಕಾರ ಈ ನಿರ್ಧಾರಕಗಕೆ ಬಂದಿದೆ ಎಂಬ ಕಾರಣ ನೀಡಲಾಗಿದೆ. ಆದರೆ ಸರ್ಕಾರದ ಈ ನಿರ್ಧಾರದ ಹಿಂದೆ ಬೇರೆಯದ್ದೇ ಕಾರಣವಿದೆ ಎಂದೇ ಚರ್ಚೆಯಾಗುತ್ತಿದೆ.
ರಾಜ್ಯದಲ್ಲಿ ಬಿಯರ್ ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಬಿಯರ್ ಸಪ್ಲೈ ಹೆಚ್ಚಾದರೆ IML ಸೇಲ್ ಆಗುವುದು ಕಡಿಮೆಯಾಗುತ್ತದೆ. ಅದೇ ಬಿಯರ್ ಕೊರತೆಯಾದಾಗ ಸಹಜವಾಗಿಯೇ IML ಗೆ ಡಿಮ್ಯಾಂಡ್ ಬರಲಿದೆ ಎಂಬ ಲೆಕ್ಕಾಚಾರದಲ್ಲಿಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇನ್ನು ಬಿಯರ್ ಗಳು ಎಷ್ಟೇ ಖರ್ಚಾದರೂ ಸರ್ಕಾರದ ಬೊಕ್ಕಸಕ್ಕೆ ಅಷ್ಟಾಗಿ ಏನು ಲಾಭವಿಲ್ಲ. ಅದೇ IML ಗಳ ಮಾರಾಟದಿಂದ ಹೆಚ್ಚಿನ ಲಾಭ ಸಿಗುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಶೇಕಡ 15ರಷ್ಟು ಹೆಚ್ಚಳವಾಗಿದ್ದರೆ, IML ಗಳ ಮಾರಾಟದಲ್ಲಿ ಶೇಕಡ 2ರಷ್ಟು ಹೆಚ್ಚಳವಾಗಿದೆ ಅಷ್ಟೇ. ಹೀಗಾಗಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.