Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಟೋ ಚಾಲಕರಿಗೆ ಮಹತ್ವದ ಮಾಹಿತಿ : ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯ ಮಾಡುತ್ತಾರೆ ?

Facebook
Twitter
Telegram
WhatsApp

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ.20) : ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯ ಮಾಡಿಕೊಡಲಾಗುವುದು.

ಚಿತ್ರದುರ್ಗ ಉಪವಿಭಾಗ : ಪ್ರತಿ ಸೋಮವಾರ ಚಿತ್ರದುರ್ಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲಿ,

ಜುಲೈ 28, ಆಗಸ್ಟ್ 4 ಮತ್ತು 11 ರಂದು ಹಾಗೂ ಸೆಪ್ಟೆಂಬರ್ 1 ಮತ್ತು 8 ರಂದು ಹೊಸದುರ್ಗದ ಎಪಿಎಂಸಿ ಮಾರ್ಕೆಟ್‍ನಲ್ಲಿ ಹಾಗೂ

ಆಗಸ್ಟ್ 19, ಸೆಪ್ಟೆಂಬರ್ 2 ಮತ್ತು 5 ರಂದು ಹೊಳಲ್ಕೆರೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ, ವಾಲ್ಮಿಕಿ ಭವನದಲ್ಲಿ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯಯನ್ನು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30ರವರೆಗೆ ಮಾಡಿಕೊಡಲಾಗುವುದು.

ಚಳ್ಳಕೆರೆ ಉಪವಿಭಾಗ: ಪ್ರತಿ ಸೋಮವಾರ ಚಳ್ಳಕೆರೆ ಉಪವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲಿ,

ಜುಲೈ 27, ಆಗಸ್ಟ್ 3, ಆಗಸ್ಟ್ 10,
ಆಗಸ್ಟ್ 24 ರಂದು ಹಿರಿಯೂರಿನ ಸಂತೆಪೇಟೆ, ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಹತ್ತಿರ, ರಾಮಮಂದಿರ ರಸ್ತೆಯಲ್ಲಿ,

ಆಗಸ್ಟ್ 5, ಆಗಸ್ಟ್ 19 ಸೆಪ್ಟೆಂಬರ್ 2 ರಂದು ಮೊಳಕಾಲ್ಮೂರಿನ ಕೆನರಾ ಬ್ಯಾಂಕ್ ಹತ್ತಿರದ ಹೆಚ್‍ಆರ್ ರಸ್ತೆಯಲ್ಲಿ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯಯನ್ನು ಅಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30 ರವರೆಗೆ ಮಾಡಿಕೊಡಲಾಗುವುದು ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನ

ಸುದ್ದಿಒನ್, ಚಿತ್ರದುರ್ಗ: ಜು.07 :  ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ಎಸ್.ಎಸ್.ಎಲ್.ಸಿ,  ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು. ಜುಲೈ 10 ಕೊನೆ ದಿನಾಂಕ ಆಗಿದೆ. ಎಸ್.ಎಸ್.ಎಲ್.ಸಿ ಮತ್ತು

ಔಷಧಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸಿ, ಗಿಡಮರ ಬೆಳಸಿ ಆರೋಗ್ಯ ಕಾಪಾಡಿಕೊಳ್ಳಿ : ಸಿದ್ದರಾಜು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಜು. 07 :  ನಗರದ ಬ್ಯಾಂಕ್ ಕಾಲೋನಿಯ ಶ್ರೀ ಮುರುಘ ರಾಜೇಂದ್ರ ಆಟದ ಮೈದಾನದಲ್ಲಿ ಟಾರ್ಗೆಟ್

ಜುಲೈ 20 ರಂದು ಗಿನ್ನಿಸ್ ದಾಖಲೆ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಆಚರಣೆ : ಎಸ್.ರವಿಕುಮಾರ್

ಸುದ್ದಿಒನ್, ಚಿತ್ರದುರ್ಗ, ಜುಲೈ. 07 :ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು. ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ದೀಕ್ಷಾ ರಜತ್ ಮಹೋತ್ಸವದ ಪೂರ್ವಭಾವಿ

error: Content is protected !!