ಪರಮಹಂಸ ಜಿ ಮಹಾರಾಜ್ ದೇವಾಲಯವೂ 100 ವರ್ಷಗಳ ಇತಿಹಾಸವನ್ನು ಹೊಂದಿತ್ತು. ಇದೇ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿತ್ತು. 2020ರಲ್ಲಿ ನಡೆದ ದಾಳಿಯಿಂದಾಗಿ ಈ ದೇವಾಲಯ ಧ್ವಂಸವಾಗಿತ್ತು. ಇದೀಗ ಆ ದೇವಸ್ಥಾನವನ್ನ ಮತ್ತೆ ನಿರ್ಮಾಣ ಮಾಡಲಾಗಿದೆ.
ಧ್ವಂಸಗೊಂಡ ಬಳಿಕ ಅಲ್ಲಿನ ಸ್ಥಳೀಯ ಆಡಳಿತ ಪುನರ್ ನಿರ್ಮಾಣ ಮಾಡುವ ಭರವಸೆ ನೀಡಿತ್ತು. ಅದರಂತೆ ಪುನರ್ ನಿರ್ಮಾಣ ಮಾಡಿದ್ದು, ಅಚ್ಚರಿಯಂತೆ ಪಾಕಿಸ್ತಾನದ ಚೀಫ್ ಜೆಸ್ಟೀಸ್ ಗುಲ್ಜಾರ್ ಅಹ್ಮದ್ ಲೋಕಾರ್ಪಣೆ ಮಾಡಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ದೇವಾಲಯದಲ್ಲಿ ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗಿತ್ತು. ದೇವಾಲಯ ಉದ್ಘಾಟನೆ ಬಳಿಕ ಮಾತನಾಡಿದ ಚೀಫ್ ಜಸ್ಟಿಸ್, ಪಾಕ್ ಸಂವಿಧಾನದ ಪ್ರಕಾರ ಎಲ್ಲಾ ಧರ್ಮದ ಜನರಂತೆಯೆ ಹಿಂದೂಗಳಿಗೂ ಸಮಾನ ಹಕ್ಕಿದೆ ಎಂದಿದ್ದಾರೆ.