ಸುದ್ದಿಒನ್, ಹಿರಿಯೂರು, ಅಕ್ಟೋಬರ್. 24 : ತಾಲೂಕಿನ ವಾಣಿವಿಲಾಸ ಜಲಾಶಯದ ಮೇಲ್ಭಾಗದ ಹಿನ್ನೀರಿನ ದಡದಲ್ಲಿರುವ (ಹೊಸದುರ್ಗ ಗಡಿಭಾಗ) ಐತಿಹಾಸಿಕ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ಅಭಿನೋತ್ಸವ ಹಾಗೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ.
ನಾಳೆ ಬೆಳಿಗ್ಗೆ 8 ಗಂಟೆಗೆ ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿಯಿಂದ ಉತ್ಸವ ಮೂರ್ತಿ ಹೊರಟು, ಶಿಲಾಮೂರ್ತಿ ಇರುವ ಸ್ಥಾನಕ್ಕೆ ಬರಲಿದೆ. ಬೆಳಿಗ್ಗೆ 10 ಗಂಟೆಗೆ ಜಾತ್ರೆ ಮತ್ತು ಅಂಬಿನೋತ್ಸವ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ನಂತರ ಸಂಜೆ 6 ಗಂಟೆಗೆ ಉತ್ಸವ ಮೂರ್ತಿ ಗ್ರಾಮಕ್ಕೆ ಹಿಂತಿರುಗಲಿದೆ. ದಿನಾಂಕ 26ರಂದು ರಾತ್ರಿ 9ಗಂಟೆಗೆ ಅಂಚಿಬಾರಿಹಟ್ಟಿಯಲ್ಲಿ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ.
ದಿನಾಂಕ 27ರಂದು ಭಕ್ತಾದಿಗಳಿಂದ ದಾಸೋಹ, ಹೂವಿನ ಪಲ್ಲಕ್ಕಿ ಹಾಗೂ ಮದಲ್ಸೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.