ಚಿಕ್ಕಬಳ್ಳಾಪುರ: ಸದ್ಯದ ಸ್ಥಿತಿಯಲ್ಲಿ ಎಲ್ಲಾ ತರಕಾರಿ ಬೆಲೆಯೂ ಗಗನಕ್ಕೇರಿದೆ. ಅದರಲ್ಲೂ ಟೊಮ್ಯಾಟೊ ಬೆಲೆಯಂತು ಕೇಳುವ ಹಾಗೇ ಇಲ್ಲ. ಒಂದು ಟೊಮ್ಯಾಟೊ ಇದ್ರೂ ವೇಸ್ಟ್ ಮಾಡಬೇಕೆಂಬ ಮನಸ್ಸಾಗಲ್ಲ. ಅದೇ ಥರ ಮಹಿಳೆಯೊಬ್ಬಳು ಮಾರುಕಟ್ಟೆಯಲ್ಲಿ ಬಿದ್ದ ಟೊಮ್ಯಾಟೋ ಆಯ್ದುಕೊಳ್ಳಲು ಹೋಗಿ ಸಾವಿಗೀಡಾದ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಗಂಗಮ್ಮ ಎಂಬುವವರು ಮೃತ ಮಹಿಳೆ.

ಟೋಮ್ಯಾಟೋ ಬೆಲೆ ಹೆಚ್ಚಾಗಿರೋ ಹಿನ್ನೆಲೆ ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಳಗೆ ಬಿದ್ದಿದ್ದ ಟೊಮ್ಯಾಟೊ ನೋಡಿ ಗಂಗಮ್ಮ ಆಯ್ದುಕೊಳ್ಳಲು ಮುಂದಾಗಿದ್ದಾರೆ. ಆದ್ರೆ ರಿವರ್ಸ್ ತೆಗೆಯಲು ಹೋದ ಕ್ಯಾಂಟರ್ ಗಂಗಮ್ಮನ ಮೇಲೆ ಹರಿದಿದೆ. ಜೆಜೆ ಕಾಲೋನಿಯ ನಿವಾಸಿ ಈ ಮೃತ ಗಂಗಮ್ಮ.

ಕ್ಯಾಂಟರ್ ಹರಿದ ಪರಿಣಾಮ ಗಂಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನೆ ಮಾಡಲಾಗಿದೆ. ಚಿಂತಾಮಣಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


