Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭಯೋಗ? ಉದ್ಯೋಗ, ವ್ಯಾಪಾರ, ಆರ್ಥಿಕ ವಿಚಾರಗಳಲ್ಲಿ ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

---Advertisement---

ಬೆಂಗಳೂರು: ನವೆಂಬರ್ 24, 2026ರ ಮಂಗಳವಾರದಂದು ಗ್ರಹಗಳ ಚಲನೆಯ ಆಧಾರದ ಮೇಲೆ ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ದಿನಭವಿಷ್ಯ ಹೇಗಿದೆ? ಉದ್ಯೋಗ, ವ್ಯಾಪಾರ, ಹಣಕಾಸು, ಕುಟುಂಬ ಹಾಗೂ ವೈಯಕ್ತಿಕ ಜೀವನದಲ್ಲಿ ಯಾವ ರಾಶಿಯವರಿಗೆ ಅನುಕೂಲಕರ ದಿನವಾಗಲಿದೆ ಎಂಬುದರ ವಿವರ ಇಲ್ಲಿದೆ.

ಮೇಷ ರಾಶಿ: ಹೂಡಿಕೆ ಮತ್ತು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಚರ್ಚೆಗಳು ಹಾಗೂ ತಂತ್ರಗಳು ಫಲ ನೀಡಲಿವೆ. ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆಯಾಗಲಿದೆ. ರಕ್ಷಣೆ, ನ್ಯಾಯಾಂಗ, ಬೋಧನೆ, ಸಾರಿಗೆ ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಆರ್ಥಿಕವಾಗಿ ಉತ್ತೇಜನಕಾರಿ ದಿನವಾಗಿದೆ.

ವೃಷಭ ರಾಶಿ: ಹೂಡಿಕೆ ಮತ್ತು ಉಳಿತಾಯ ಯೋಜನೆಗಳತ್ತ ಹೆಚ್ಚಿನ ಗಮನ ಹರಿಸಲಿದ್ದೀರಿ. ಸಾಲ ಮಂಜೂರಾಗುವ ಸಾಧ್ಯತೆಯಿದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ ಹಾಗೂ ದುರಸ್ತಿ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಅಗಲಿದ ಆತ್ಮೀಯರನ್ನು ಸ್ಮರಿಸಿಕೊಳ್ಳಲಿದ್ದೀರಿ.

ಮಿಥುನ ರಾಶಿ: ಸಭೆಗಳು ಮತ್ತು ಸಾಮೂಹಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದೀರಿ. ಸಂಗಾತಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯೊಂದು ತಿಳಿಯಲಿದೆ. ಅಡೆತಡೆಗಳು ಎದುರಾದರೂ ಸಂಗಾತಿಯ ಸಹಕಾರದಿಂದ ಗುರಿ ಸಾಧಿಸುವಿರಿ. ದೂರದ ಊರಿನಲ್ಲಿರುವ ವ್ಯಕ್ತಿಗಳೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ.

ಕರ್ಕಾಟಕ ರಾಶಿ: ವೃತ್ತಿಪರ ಸಭೆಗಳಿಂದ ಲಾಭವಾಗಲಿದೆ. ಆರ್ಥಿಕ ವಿಷಯಗಳಲ್ಲಿ ಆಪ್ತರ ಸಹಕಾರ ದೊರೆಯಲಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ವೃತ್ತಿಪರವಾಗಿ ಉತ್ತಮ ದಿನ. ಬಂಧುಮಿತ್ರರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ.

ಸಿಂಹ ರಾಶಿ: ಉದ್ಯೋಗ ಮತ್ತು ವ್ಯಾಪಾರದಲ್ಲಿ ಸೃಜನಶೀಲತೆಯಿಂದ ಕಾರ್ಯನಿರ್ವಹಿಸಿ ಗುರಿ ತಲುಪುವಿರಿ. ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳ ವಿಷಯದಲ್ಲಿ ಪೋಷಕರಾಗಿ ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಮೇಲಧಿಕಾರಿಗಳ ವರ್ತನೆ ನಿಮಗೆ ಪ್ರೋತ್ಸಾಹದಾಯಕವಾಗಿರುತ್ತದೆ.

ಕನ್ಯಾ ರಾಶಿ: ಬಂಧುಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಆಡಿಟಿಂಗ್, ನ್ಯಾಯಾಂಗ, ಬೋಧನೆ, ಸಾರಿಗೆ ಮತ್ತು ಪ್ರಕಾಶನ ಕ್ಷೇತ್ರದವರು ತಮ್ಮ ಕಾರ್ಯವೈಖರಿಯನ್ನು ಪರಾಮರ್ಶಿಸಿಕೊಳ್ಳಲಿದ್ದಾರೆ. ಮನೆಗೆ ಅಗತ್ಯವಿರುವ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವಿರಿ ಹಾಗೂ ಅಂದುಕೊಂಡ ಗುರಿ ಸಾಧಿಸುವಿರಿ.

ತುಲಾ ರಾಶಿ : ಸಾಲ ಮತ್ತು ಹೂಡಿಕೆಗೆ ಸಂಬಂಧಿಸಿದ ಮಾತುಕತೆಗಳಿಗೆ ಇಂದು ಅತ್ಯಂತ ಅನುಕೂಲಕರ ದಿನ. ಹಳೆಯ ಬಾಕಿ ಹಣ ವಸೂಲಾಗಲಿದೆ. ವಾಹನ ಖರೀದಿಸುವ ಯೋಗವಿದೆ. ಆಸ್ಪತ್ರೆ, ಹಾರ್ಡ್‌ವೇರ್, ಫೈನಾನ್ಸ್ ಮತ್ತು ಚಿಟ್‌ಫಂಡ್ ಕ್ಷೇತ್ರದವರಿಗೆ ಲಾಭದಾಯಕ ದಿನವಾಗಿದೆ.

ವೃಶ್ಚಿಕ ರಾಶಿ  :ಹೂಡಿಕೆಗಳಿಂದ ಉತ್ತಮ ಪ್ರತಿಫಲ ದೊರೆಯಲಿದೆ. ಷೇರು ಅಥವಾ ಊಹಾತ್ಮಕ ವ್ಯವಹಾರಗಳಲ್ಲಿ ಲಾಭವಾಗಲಿದೆ. ಸ್ಪರ್ಧೆಗಳಲ್ಲಿ ಜಯ ಸಾಧಿಸುವಿರಿ. ಹೊಸ ಪರಿಚಯಗಳಿಂದ ಲಾಭವಾಗಲಿದೆ. ಸಂಗಾತಿಗಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ ಹಾಗೂ ನಿಮ್ಮ ಸಂಕಲ್ಪ ಈಡೇರಲಿದೆ.

ಧನು ರಾಶಿ ಹೊಸ ಯೋಜನೆಗಳನ್ನು ಆರಂಭಿಸಲು ಶುಭ ದಿನ. ವೈದ್ಯಕೀಯ, ಕೈಗಾರಿಕೆ, ಹೋಟೆಲ್ ಮತ್ತು ಕೃಷಿ ಕ್ಷೇತ್ರದವರು ಹೊಸ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡು ಗುರಿ ಸಾಧಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಕರ ರಾಶಿ: ಉನ್ನತ ಶಿಕ್ಷಣ ಮತ್ತು ವಿದೇಶಿ ವ್ಯವಹಾರಗಳಿಗೆ ಅನುಕೂಲಕರ ದಿನ. ರಾಜಕೀಯ ಮತ್ತು ಸಿನಿಮಾ ರಂಗದವರಿಗೆ ಪ್ರೋತ್ಸಾಹ ದೊರೆಯಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಪ್ರೀತಿಪಾತ್ರರಿಂದ ಶುಭ ಸುದ್ದಿ ಬರಲಿದೆ. ಸಿನಿಮಾ, ದೂರದರ್ಶನ ಮತ್ತು ಪತ್ರಿಕಾ ರಂಗದವರಿಗೆ ಉತ್ತಮ ದಿನವಾಗಿದೆ.

ಕುಂಭ ರಾಶಿ: ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದವರಿಗೆ ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಿಕೊಳ್ಳಲಿದ್ದೀರಿ. ಬಂಧುಮಿತ್ರರ ಭೇಟಿಯಿಂದ ಮನೆಯಲ್ಲಿ ಸಂತಸ ನೆಲೆಸಲಿದೆ. ಮನೆ ಅಥವಾ ನಿವೇಶನ ಖರೀದಿಗೆ ಅಗತ್ಯವಿರುವ ಹಣಕಾಸಿನ ಹೊಂದಾಣಿಕೆಯಾಗಲಿದೆ.

ಮೀನ ರಾಶಿ : ವೃತ್ತಿ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಚರ್ಚೆಗಳು ಹಾಗೂ ಪ್ರಯಾಣಗಳಿಗೆ ಅನುಕೂಲಕರ ದಿನ. ವಿದ್ಯಾರ್ಥಿಗಳಿಗೆ ಹಿರಿಯರಿಂದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಗಲಿದೆ. ಸ್ಟೇಷನರಿ, ಬೋಧನೆ ಮತ್ತು ವಾಹನ ಕ್ಷೇತ್ರದವರಿಗೆ ಶುಭ ದಿನ. ಉದ್ಯೋಗದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ.

Join WhatsApp

Join Now

Join Telegram

Join Now