ಬೆಂಗಳೂರು: ಸೆಪ್ಟೆಂಬರ್ 4, 2026ರ ಶುಕ್ರವಾರ 12 ರಾಶಿಗಳ ಪಾಲಿಗೆ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಕೆಲವರಿಗೆ ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯವಿದ್ದರೆ, ಇನ್ನೂ ಕೆಲವರಿಗೆ ಉದ್ಯೋಗ, ವ್ಯಾಪಾರ ಹಾಗೂ ಕುಟುಂಬ ಜೀವನದಲ್ಲಿ ಉತ್ತಮ ಬೆಳವಣಿಗೆಗಳ ಸಾಧ್ಯತೆ ಇದೆ. ಹೀಗಿದೆ ಇಂದಿನ ರಾಶಿಫಲ.
ಮೇಷ

ಇಂದು ಮಹತ್ವದ ಮಾಹಿತಿ ನಿಮ್ಮನ್ನು ಚಿಂತೆಗೀಡು ಮಾಡುವ ಸಾಧ್ಯತೆ ಇದೆ. ಒಪ್ಪಂದಗಳು ಮತ್ತು ಅಗ್ರಿಮೆಂಟ್ಗಳಿಗೆ ಸಹಿ ಮಾಡುವ ಮುನ್ನ ಸಂಪೂರ್ಣ ಪರಿಶೀಲನೆ ನಡೆಸುವುದು ಒಳಿತು. ಉದ್ಯೋಗ ಹಾಗೂ ವ್ಯಾಪಾರ ಸಂಬಂಧಿತ ಮಾತುಕತೆ ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಸಹೋದ್ಯೋಗಿಗಳೊಂದಿಗೆ ಸಂತಸದ ಸಮಯ ಕಳೆಯುವಿರಿ. ಶ್ರೀಕೃಷ್ಣನ ಆರಾಧನೆ ಶುಭಕರ.
ವೃಷಭ
ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ. ಹೂಡಿಕೆ ಮಾಡುವಾಗ ಆತುರದ ನಿರ್ಧಾರ ಬೇಡ. ಮಕ್ಕಳ ಹಾಗೂ ಪ್ರೀತಿಪಾತ್ರರಿಗಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಮಾಧ್ಯಮ, ಶಿಕ್ಷಣ ಮತ್ತು ಜಾಹೀರಾತು ಕ್ಷೇತ್ರದವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ದುರ್ಗಾದೇವಿಯ ಆರಾಧನೆ ಶುಭಕರ.
ಮಿಥುನ
ಸ್ಥಿರಾಸ್ತಿ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬ ಸದಸ್ಯರ ವರ್ತನೆಯಲ್ಲಿ ಬದಲಾವಣೆ ಕಂಡುಬರಬಹುದು. ಮನಸ್ಸು ಕೆಲವು ಬದಲಾವಣೆಗಳನ್ನು ಬಯಸಬಹುದು. ವರ್ಗಾವಣೆ ಅಥವಾ ಸ್ಥಳ ಬದಲಾವಣೆ ಸ್ವಲ್ಪ ಅಸೌಕರ್ಯ ಉಂಟುಮಾಡಬಹುದು. ಮನೆಗೆ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಗುಣಮಟ್ಟಕ್ಕೆ ಆದ್ಯತೆ ನೀಡಿ. ಶ್ರೀಕೃಷ್ಣ ಅಷ್ಟೋತ್ತರ ಶತನಾಮ ಸ್ತೋತ್ರ ಪಠಣ ಶುಭಕರ.
ಕರ್ಕಾಟಕ
ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರು ಇಂದು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಅಡೆತಡೆಗಳು ಎದುರಾಗಬಹುದು. ಕೆಲವು ಮಾಹಿತಿಗಳು ಬೇಸರ ಉಂಟುಮಾಡುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಬಹುದು. ಪ್ರಯಾಣ ಹಾಗೂ ಮಾತುಕತೆಯಲ್ಲಿ ಜಾಗರೂಕರಾಗಿರಿ. ಶ್ರೀಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭಕರ.
ಸಿಂಹ
ಖರ್ಚುಗಳು ನಿರೀಕ್ಷೆಗಿಂತ ಹೆಚ್ಚಾಗಬಹುದು. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಹೂಡಿಕೆ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಬಹುದು. ಸಾಲ ಪಡೆಯುವ ಪ್ರಯತ್ನಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಶ್ರೀಕೃಷ್ಣನ ಆರಾಧನೆ ಶುಭಕರ.
ಕನ್ಯಾ
ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಇಂದು ಸೂಕ್ತ ಸಮಯವಲ್ಲ. ಹೊಸ ಯೋಜನೆ ಅಥವಾ ಕಾರ್ಯತಂತ್ರ ಜಾರಿಗೆ ತರುವುದನ್ನು ಮುಂದೂಡುವುದು ಒಳಿತು. ಪೋಷಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗೌರವ-ಮರ್ಯಾದೆಗೆ ಧಕ್ಕೆ ತರುವಂತಹ ಪರಿಸ್ಥಿತಿ ಎದುರಾಗದಂತೆ ಮಾತು ಮತ್ತು ನಡೆಗಳಲ್ಲಿ ಎಚ್ಚರಿಕೆ ಅಗತ್ಯ. ಭಾಗವತ ಪಾರಾಯಣ ಶುಭಕರ.
ತುಲಾ
ಮನಸ್ಸಿನಲ್ಲಿ ಗೊಂದಲ ಅಥವಾ ಕಿರಿಕಿರಿ ಉಂಟಾಗಬಹುದು. ಯಾವುದೇ ವಿಷಯದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಕಷ್ಟವಾಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣದ ಪ್ರಯತ್ನಗಳು ನಿಧಾನವಾಗಿ ಫಲ ನೀಡಬಹುದು. ಪ್ರಯಾಣ ಮತ್ತು ಚರ್ಚೆಗಳಲ್ಲಿ ಎಚ್ಚರಿಕೆ ವಹಿಸಿ. ಬಂಧು-ಮಿತ್ರರೊಂದಿಗೆ ಸಂತಸದ ಸಮಯ ಕಳೆಯುವಿರಿ. ಶ್ರೀಕೃಷ್ಣ ಲೀಲಾಮೃತ ಶ್ರವಣ ಶುಭಕರ.
ವೃಶ್ಚಿಕ
ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಹೂಡಿಕೆ ಮತ್ತು ಉಳಿತಾಯ ಯೋಜನೆಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಹಣ ಸಕಾಲಕ್ಕೆ ಕೈ ಸೇರುವಲ್ಲಿ ವಿಳಂಬವಾಗಬಹುದು. ಆರ್ಥಿಕ ಗುರಿ ಸಾಧನೆಗೆ ಬಂಧು-ಮಿತ್ರರ ಸಹಕಾರ ದೊರೆಯಲಿದೆ. ಶ್ರೀಕೃಷ್ಣ ಅಷ್ಟೋತ್ತರ ಶತನಾಮ ಪಠಣ ಶುಭಕರ.
ಧನು
ಹೂಡಿಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಸಭೆಗಳು ಮತ್ತು ಸಮಾರಂಭಗಳಿಂದ ಖರ್ಚು ಹೆಚ್ಚಾಗಬಹುದು. ತಂಡದ ಕೆಲಸಗಳಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಂಕಲ್ಪಗಳನ್ನು ಈಡೇರಿಸಲು ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಗೋಸೇವೆ ಶುಭಕರ.
ಮಕರ
ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ಉಂಟುಮಾಡಬಹುದು. ಹೋಟೆಲ್, ವೈದ್ಯಕೀಯ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿರುವವರು ನಿಧಾನವಾಗಿ ಹಾಗೂ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ವಿಂದು-ವಿನೋದಗಳಿಗೆ ಹೆಚ್ಚಿನ ಹಣ ಖರ್ಚಾಗಬಹುದು. ಆರೋಗ್ಯದ ಬಗ್ಗೆ ಗಮನ ಹರಿಸಿ. ಗುರಿ ಸಾಧನೆಯಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಗೋಪಾಲಕೃಷ್ಣನ ದರ್ಶನ ಶುಭಕರ.
ಕುಂಭ
ಮಕ್ಕಳು ಮತ್ತು ಪ್ರೀತಿಪಾತ್ರರಿಗಾಗಿ ಖರ್ಚು ಹೆಚ್ಚಾಗಬಹುದು. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಶಿಕ್ಷಣಕ್ಕಾಗಿ ಅಗತ್ಯವಿರುವ ಹಣ ಸಕಾಲಕ್ಕೆ ದೊರೆಯದ ಸಾಧ್ಯತೆ ಇದೆ. ಆಪ್ತರ ಆರೋಗ್ಯದ ಬಗ್ಗೆ ಚಿಂತೆ ಮೂಡಬಹುದು. ಶ್ರೀಕೃಷ್ಣ ಅಷ್ಟೋತ್ತರ ಶತನಾಮ ಪಠಣ ಶುಭಕರ.
ಮೀನ
ಇಂದು ಮೀನ ರಾಶಿಯವರಿಗೆ ಒಟ್ಟಾರೆ ಅನುಕೂಲಕರ ದಿನವಾಗಿರಲಿದೆ. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಅದೃಷ್ಟ ಕೈಹಿಡಿಯುವ ಸಾಧ್ಯತೆ ಇದೆ. ವೃತ್ತಿಪರ ಪ್ರಗತಿಗೆ ಉತ್ತಮ ಅವಕಾಶಗಳು ದೊರೆಯಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ.

















