ಬೆಂಗಳೂರು: ಆರೋಗ್ಯ ಇಲಾಖೆ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಪ್ರತಿದಿನ ಟೆಸ್ಟ್ ನಡೆಸಲಾಗುತ್ತಿದೆ. ಇಂದು ಕೂಡ 3527 ಜನರಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ಅದರಲ್ಲಿ 229 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಕಳೆದ 24 ಗಂಟೆಯಲ್ಲಿ 2972 RTPCR ಟೆಸ್ಟ್, 555 RAT ಟೆಸ್ಟ್ ಮಾಡಲಾಗಿದೆ. ಅದೆಲ್ಲಿ 229 ಕೇಸ್ ಹೊಸದಾಗಿ ದಾಖಲಾಗಿದೆ. ಈ ಮೂಲಕ 1000 ಕೇಸ್ ಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. 943 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 57 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 22 ಜನ ಐಸಿಯುನಲ್ಲಿದ್ದು, 62 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾದಿಂದ ಯಾವುದೇ ಡೆತ್ ಸಂಭವಿಸಿಲ್ಲ.
ಬೆಂಗಳೂರು ಒಂದರಲ್ಲೇ 64 ಕೇಸ್ ದಾಖಲಾಗಿದ್ದು, ಉಳಿದಂತೆ ಬೆಂಗಳೂರು ಗ್ರಾಮಾಂತರ-9, ಬಳ್ಳಾರಿ – 4, ಬೆಳಗಾವಿ -1, ಚಾಮರಾಜನಗರ -12, ಚಿಕ್ಕಬಳ್ಳಾಪುರ -14, ಚಿತ್ರದುರ್ಗ -4, ದಕ್ಷುಣ ಕನ್ನಡ -10 ಕೇಸ್ ಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಕೊರೊನಾ ಕೇಸ್ ಗಳು ಆಕ್ಟೀವ್ ಆಗಿವೆ.