ಬೆಂಗಳೂರು: ಚಿನ್ನ ಬೆಳ್ಳಿ ಬೆಲೆಯಲ್ಲಿ ನಿರೀಕ್ಷೆಯಂತೆ ಡಿಸೆಂಬರ್ ತಿಂಗಳಲ್ಲಿ ಇಳಿಕೆಯಾಗುತ್ತಿದೆ. ದಿನೇ ದಿನೇ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕಳೆದ ಕೆಲವು ದಿನದಿಂದ ಇಳಿಕೆಯತ್ತಲೇ ಮುಖ ಮಾಡಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 7,100 ರೂಪಾಯಿ ಇದೆ. 24 ಕದಯಾರಟ್ ಅಪರಂಜಿ ಚಿನ್ನ 7,745 ರೂಪಾಯಿ ಇದೆ. ಹತ್ತು ಗ್ರಾಂಗೆ 71,000 ರೂಪಾತಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 77,450 ರೂಪಾಯಿ ಆಗಿದೆ.
ಸದ್ಯ ಭಾರತ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 71,100 ರೂಪಾಯಿ ಇದೆ. ಉಳಿದಂತೆ ದೆಹಲಿಯಲ್ಲಿ 71,150 ಇದ್ರೆ, ಅಹ್ಮದಾಬಾದ್ ನಲ್ಲಿ 71,050 ರೂಪಾಯಿ ಇದೆ. ಜೈಪುರ್, ಲಕ್ನೋ ನಗರದಲ್ಲಿ 71,050 ರೂಪಾಯಿ ಇದೆ. ವಿದೇಶದಲ್ಲಿನ ದರವನ್ನು ನೋಡುವುದಾದರೆ ಮಲೇಷ್ಯಾದಲ್ಲಿ 68,790 ಇದೆ. ದುಬೈನಲ್ಲಿ 68,200 ಆಗಿದೆ. ಇನ್ನು ಅಮೆರಿಕಾದಲ್ಲಿ 66,350 ರೂಪಾಯಿ ಇದೆ. ಸಿಂಗಾಪುರದಲ್ಲಿ 68,200 ರೂಪಾಯಿ ಇದೆ. ಸೌದಿ ಅರೇಬಿಯಾದಲ್ಲಿ 67,940 ರೂಪಾಯಿ ಇದೆ. ಈ ಮೂಲಕ ವಿದೇಶದಲ್ಲೂ ಒಂದೊಂದು ರೀತಿಯ ಬೆಲೆ ಇದೆ.
ಹಾಗೇ ಬೆಳ್ಳಿ ಬೆಲೆಯಲ್ಲೂ ವ್ಯತ್ಯಾಸವಾಗಿದ್ದು, ನೂರು ಗ್ರಾಂ ಬೆಳ್ಳಿ ಬೆಲೆ, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್ ನಗರದಲ್ಲಿ 9,140 ರೂಪಾಯಿ ಇದೆ. ಚೆನ್ನೈ, ಭುವನೇಶ್ವರದಲ್ಲಿ 9,890 ರೂಪಾಯಿ ಇದೆ.