ವರ್ಷದ ಕೊನೆಯ ರಾಹುಗ್ರಸ್ತ ರಕ್ತಚಂದ್ರಗ್ರಹಣ.. ಎಲ್ಲೆಲ್ಲಿ ಗೋಚರಿಸಲಿದೆ ಎಂಬ ಮಾಹಿತಿ ಇಲ್ಲಿದೆ

suddionenews
1 Min Read

ಇಂದು ನಭೋಮಂಡಲದಲ್ಲಿ ಮತ್ತೊಂದು ವಿಸ್ಮಯ ಕಾಣಲಿಲ್ಲ. ವರ್ಷದ ಕೊನೆಯ ರಾಹುಗ್ರಸ್ತ ರಕ್ತಚಂದ್ರಗ್ರಹಣದ ದಿನವಿಂದು. ದೇಶದ ಎಲ್ಲಾ ಕಡೆಯಲ್ಲೂ ಚಂದ್ರಗ್ರಹಣ ಗೋಚರಿಸಲಿದೆ. ಈ ಗ್ರಹಣದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಕಳೆದ ವಾರ ಅಂದ್ರೆ ದೀಪಾವಳಿ ಹಬ್ಬದಲ್ಲಷ್ಟೇ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡಿದ್ದೆವು. ಇದೀಗ 15ನೇ ದಿನಕ್ಕೆ ಚಂದ್ರಗ್ರಹಣ ಗೋಚರಿಸಲಿದೆ. ರಕ್ತಚಂದ್ರಗ್ರಹಣ ಕಾಣಿಸುವಾಗ ಕೆಂಪು ಬಣ್ಣದಲ್ಲಿ ಗೋಚರಿಸಲಿದೆ. ಜಾಗತಿಕವಾಗಿ ಮಧ್ಯಾಹ್ನ 2.39ಕ್ಕೆ ಶುರುವಾಗಲಿದೆ. ದೇಶಾದ್ಯಂತ ಗೋಚರಿಸುವ ಕಾರಣ, ಭಾರತದ ಕಾಲಮಾನದಲ್ಲಿ ಸಮಯ ಬದಲಾವಣೆಯಾಗಲಿದೆ. ಭಾರತದಲ್ಲಿ ಸಂಜೆ 5.29ರ ಬಳಿಕ ಆರಂಭವಗಲಿದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಸಂಜೆ 5.53ಕ್ಕೆ ಶುರುವಾಗಿ 6.18ಕ್ಕೆ ಕೊನೆಯಾಗಲಿದೆ. ಚೆನ್ನೈನಲ್ಲಿ 5.53ಕ್ಕೆ ಆರಂಭವಾಗಿ 6.18ಕ್ಕೆ ಕೊನೆಯಾಗಲಿದೆ. ಇನ್ನು ಗ್ರಹಣದ ಕಾಲದಲ್ಲಿ ದೇಗುಲಗಳ ಬಂದ್ ಇದ್ದಂತೆ ಈ ಬಾರಿಯೂ ದೇಗುಲಗಳನ್ನು ಬಂದ್ ಮಾಡಲಾಗುತ್ತಿದೆ. ಗ್ರಹಣ ಮುಗಿದ ಮೇಲೆ ಶುಚಿ ಮಾಡಿ, ದೇವರಿಗೆ ವಿಶೇಷ ಪೂಜೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *