ಇವತ್ತು ಫಲಿತಾಂಶದ ದಿನ : ಯಾರಿಗೆ ಸಿಗಲಿದೆ ಬಿ’ಹಾರ’..?

ಬಿಹಾರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರಬೀಳಲಿದೆ. 243 ಸ್ಥಾನಗಳಿಗೆ ನಡೆದ ಮತದಾನದ ಎಣಿಕೆ ಇಂದು ನಡೆಯಲಿದೆ. ಬಿಹಾರ ಜಿಲ್ಲೆಯಾದ್ಯಂತ 38 ಜಿಲ್ಲೆಗಳ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ತೇಜಸ್ವಿ ಉಅದವ್, ತೇಜ್ ಪ್ರತಾಪ್ ಯಾದವ್, ವಿಜಯ್ ಕುಮಾರ್ ಸಿನ್ಹಾ, ಲಖಿಸರಾಯಚ, ಸಾಮ್ರಾಟ್ ಚೌಧರಿ, ಅನಂತ್ ಸಿಂಗ್, ಮೈಥಿಲಿ ಠಾಕೂರ್ ಸೇರಿದಂತೆ ಹಲವು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ‌. ಮತದಾನ ಪ್ರಭುಗಳು ಯಾರತ್ತ ಒಲವು ತೋರಿಸಿದ್ದಾರೆ ಎಂಬುದು ಇಂದು ತಿಳಿಯಲಿದೆ.

ಚುನಾವಣೋತ್ತರ ಸಮೀಕ್ಷೆಗಳೇ ಎಷ್ಟೋ ಸಲ ಸತ್ಯವಾಗಿದೆ. ಬಿಹಾರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. 243 ಕ್ಷೇತ್ರದ ವಿಧಾನಸಭೆಗೆ ಸರ್ಕಾರ ರಚನೆಯಾಗುವುದಕ್ಕೆ ಬೇಕಾಗಿರುವುದು 122 ಮ್ಯಾಜಿಕ್ ನಂಬರ್. ಬಿಹಾರದ ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶದ ಸಾಧ್ಯತೆ ಇದೆ. ನಿತೀಶ್ ಕುಮಾರ್ ಸತತ 10ನೇ ಬಾರಿ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. 2000 ದಿಂದ ಇಲ್ಲಿಯವರೆಗೂ 9 ಬಾರಿ ನಿತೀಶ್ ಪ್ರಮಾಣ ವಚನ ಸ್ವೀಜಾರ ಮಾಡಿದ್ದಾರೆ. ಒಂದು ವೇಳೆ ಮಹಾಘಟ್ ಬಂಧನ್ ಅಧಿಕಾರಕ್ಕೆ ಬಂದರೆ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗಲಿದ್ದಾರೆ.

 

ಜೊತೆಗೆ ಈ ಬಾರಿ ಬಿಹಾರ ವಿಧಾನಸಭೆ ಚುನಟವಣೆಯಲ್ಲಿ ದಾಖಲೆಯ ಮತದಾನ ಆಗಿದೆ. 67.13ರಷ್ಟು ಮತದಾನವಾಗಿದೆ. ರಾಜ್ಯದ 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2616 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತ ಎಣಿಕೆಯಲ್ಲಿ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಮತದಾನ ಪ್ರಭುಗಳು ಯಾರಿಗೆಲ್ಲಾ ಒಲಿದಿದ್ದಾರೆ ಎಂಬುದು ಮಧ್ಯಾಹ್ನದ ವೇಳೆಗೆ ತಿಳಿದು ಬಿಡುತ್ತದೆ.

Share This Article
Enable Notifications OK No thanks