ಇಂದು ನಡೆದಾಡುವ ದೇವರು ಶಿವಕುಮಾರ ಶ್ರೀಗಳ 118ನೇ ಜನ್ಮದಿನೋತ್ಸವ

1 Min Read

 

ತುಮಕೂರು; ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳ 118ನೇ ಜನಮದಿನೋತ್ಸವ. ಇದರ ಅಂಗವಾಗಿ ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಬ್ಬದ ವಾತಾವರಣ ಮೂಡಿದೆ. ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಅವರು ಭಾಗಿಯಾಗಲಿದ್ದಾರೆ. ಮಠದ ಮಕ್ಕಳಂತು ತಮ್ಮ ಗುರುಗಳ ಜನ್ಮದಿನೊಇತ್ಸವ ಆಚರಣೆಯ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.

ಮಠದಲ್ಲಿಯೇ ದೊಡ್ಡ ಕಾರ್ಯಕ್ರಮ ಮಾಡಿ ಜನ್ಮದಿನೋತ್ಸವವನ್ನ ಆಚರಣೆ ಮಾಡಲಾಗುತ್ತಿದೆ. ತುಮಕೂರು ಎಸ್ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಹಿನ್ನೆಲೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಐದಾರು ಕಡೆಗಳಲ್ಲಿ ದಾಸೋಹ ವ್ಯವಸ್ಥೆಯನ್ನು ಶ್ರೀಮಠದಲ್ಲಿ ಮಾಡಿಕೊಳ್ಳಲಾಗಿದೆ.

ಬೃಹತ್ ಕಾರ್ಯಕ್ರಮದ ಹಿನ್ನಲೆಯಲ್ಲಿ 35 ಪಿಎಸ್‌ಐ, 80ಎಎಸ್‌ಐ, 536 ಎಚ್‌ಸಿ, ಪಿಸಿ, ಮಹಿಳಾ ಪಿಸಿ, 2 ಕೆಎಸ್‌ಆರ್‌ಪಿ ತುಕಡಿ, 01 ಬಿಡಿಡಿಎಸ್‌ ಟೀಂ, 5 ಎಎಸ್ಸಿ ಟೀಮ್, 1 ಎಸ್‌ಪಿ, 1 ಎಎಸ್‌ಪಿ, 7 ಡಿಎಸ್‌ಪಿ, 13 ಇನ್ಸ್‌ಪೆಕ್ಟರ್‌, ನಿಯೋಜಿಸಲಾಗಿದೆ ಎಂದು ಎಸ್‌ಪಿ ಕೆ.ವಿ.ಅಶೋಕ್‌ ತಿಳಿಸಿದ್ದಾರೆ. ಮಠದಲ್ಲಿ ಓದಿರುವ ಮಕ್ಕಳು ಲಕ್ಷಾಂತರ ಮಂದಿ ಇದ್ದಾರೆ. ಇಂದು ಅವರಿಗೆಲ್ಲಾ ಶುಭ ದಿನ. ಹೀಗಾಗಿ ಮಠಕ್ಕೆ ಬಂದು ಸ್ವಾಮೀಜಿಯ ಗದ್ದುಗೆಯ ದರ್ಶನ ಪಡೆದು, ಮಠದಲ್ಲಿ ಸಿಗುವ ಅಬ್ನ ಪ್ರಸಾದವನ್ನು ಸ್ವೀಕರಿಸಿದರೇ ಅದೇನೋ ತೃಪ್ತಿ. ಜೀವನ ಪಾವನವಾದಂತ ಖುಷಿ. ಈ ದಿನವನ್ನು ಮಿಸ್ ಮಾಡಿಕೊಂಡವರು ಕೊರಗಿದ ಉದಾಹರಣೆಯೂ ಇದೆ. ಹೀಗಾಗಿ ಸ್ವಾಮಿಗಳ ಜನ್ಮ ದಿನಕ್ಕೆ ಬಿಡುವು ಮಾಡಿಕೊಂಡು ಎಲ್ಲರೂ ಆಗಮಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *