ನಾಲ್ಕೈದು ದಿನಗಳಿಂದ ಗಗನದತ್ತ ಮುಖಮಾಡಿದ ಚಿನ್ನದ ದರದಲ್ಲಿ ಭರ್ಜರಿ ಕುಸಿತ ಕಂಡಿದೆ. ಚಿನ್ನ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಶುಭ ಶುಕ್ರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಯಿಂದಾಗಿ ಇಂದು ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ 262 ರುಪಾಯಿ ಕುಸಿತ ಕಂಡಿದೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 2,620 ರುಪಾಯಿ ಕುಸಿತ ಕಂಡಿದೆ.

ಇಂದು ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹11,879
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹14,519
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹15,839
















