ವಾರಾಣಾಸಿ: ಇಂದು ಪ್ರಧಾನಿ ಮೋದಿ ವಾರಾಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನ ಉದ್ಘಾಟಿಸಿದ್ದಾರೆ. ಬಹು ವರ್ಷಗಳ ಕನಸು ಈಡೇರಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
#WATCH Prime Minister Narendra Modi offers prayers at Kashi Vishwanath temple in Varanasi pic.twitter.com/4pLpNubg2z
— ANI UP/Uttarakhand (@ANINewsUP) December 13, 2021
ಎರಡು ದಿನಗಳ ಕಾಲ ಪ್ರಧಾನಿ ಮೋದಿ ವಾರಾಣಾಸಿಗೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಪಿಎಂ ಮೋದಿಯವರನ್ನು ಸ್ವಾಗತ ಮಾಡಿದ್ರು. ಬಳಿಕ ಕಾಶಿ ವಿಶ್ವನಾಥ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ದಾರೆ. ಆ ಬಳಿಕ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಈ ಕಾರಿಡಾರ್ ನಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ಬಹಳ ಸುಲಭವಾಗಿ ಪ್ರವೇಶ ಪಡೆಯಬಹುದಾಗಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹರ ಹರ ಮಹಾದೇವ್ ಘೋಷಣೆಯೊಂದಿಗೆ ಭಾಷಣ ಶುರು ಮಾಡಿದ್ರು. ಇದು ಗಾಂಧೀಜಿಯವರ ಕನಸಾಗಿತ್ತು. 100 ವರ್ಷಗಳ ಹಿಂದೆ ಗಾಂಧೀಜಿ ಇಲ್ಲಿಗೆ ಬಂದಾಗ ಕಿರಿದಾದ ರಸ್ತೆ ಮತ್ತು ಹೊಲಸುಗಳನ್ನ ನೋಡು ನೋವು ವ್ಯಕ್ತಪಡಿಸಿದ್ದರು. ಗಾಂಧೀಜಿಯವರ ಹೆಸರಲ್ಲಿ ಅನೇಕರು ಅಧಿಕಾರಕ್ಕೆ ಬಂದರು. ಆದ್ರೆ ಅವರ ಭವ್ಯವಾದ ಕಾಶಿಯ ಕನಸನ್ನ ಯಾರು ನನಸು ಮಾಡಲಿಲ್ಲ. ಇಂದು ಆ ಕನಸು ನನಸಾಗಿದೆ ಎಂದಿದ್ದಾರೆ.
339 ಕೋಟಿ ರೂಪಾಯಿಯ ಈ ಯೋಜನೆಗೆ 2019ರಲ್ಲಿ ಪ್ರಧಾನಿ ಮೋದಿ ಅಡಿಪಾಯ ಹಾಕಿದ್ದರು. ಮೂರು ವರ್ಷಗಳ ಯೋಜನೆ ಇದಾಗಿತ್ತು. ಇದೀಗ ಮೂರು ವರ್ಷ ತುಂಬುವುದರೊಳಗೆ ಯೋಜನೆ ಪೂರ್ಣಗೊಂಡಿದೆ. ಇಂದು ಉದ್ಘಾಟನೆಯ ಭಾಗ್ಯ ಕಂಡಿದೆ.