ಹಿರಿಯೂರು : ಹಿಂದೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಬ್ರಿಟಿಷ್ ಅಧಿಕಾರಿಯು ಕೃಷಿಕ ಸಮಾಜ ಮತ್ತು ರೈತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ಕೃಷಿಕ ಸಮಾಜವನ್ನು ಹುಟ್ಟಿ ಹಾಕಲಾಯಿತು ಎಂದು ನೂತನ ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಕೆ. ಜಗದೀಶ್ ಕಂದಿಕೆರೆ ತಿಳಿಸಿದರು.

ಈ ಕೃಷಿಕ ಸಮಾಜವು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಹಾಗೂ ಕಾಲಕಾಲಕ್ಕೆ ಸರ್ಕಾರದ ಯೋಜನೆಗಳನ್ನು ರೈತರಿಗೆ ತಿಳಿಸುವುದು ಕೃಷಿಕ ಸಮಾಜದ ಧ್ಯೇಯೋದ್ದೇಶ ವಾಗಿದೆ ಎಂದು ತಿಳಿಸಿದರು.

ಈ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಮಂಡಳಿಗೆ ಚುನಾವಣೆ ನಡೆದಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಯಾವುದೇ ಗುಂಪು ಘರ್ಷಣೆ ಇಲ್ಲದೆ, ರೈತರ ಪರವಾಗಿ ಇರುವಂತಹ ವ್ಯಕ್ತಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ, ರೈತರ ಪರವಾಗಿ ಕೆಲಸ ಮಾಡುವಂತೆ ಆಯ್ಕೆಯಾದ ಎಲ್ಲರಿಗೂ ಶುಭ ಹಾರೈಸಿದರು ಎಂದು ತಿಳಿಸಿದರು.
ಹಿರಿಯೂರು ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ.ಹೆಚ್. ಕಾಂತರಾಜ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪಿಎಸ್ ಪಾತಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಎಂಡಿ. ರವಿ, ಖಜಾಂಚಿಯಾಗಿ ಫಕ್ರುದ್ದೀನ್, ಜಿಲ್ಲಾ ಕೃಷಿಕ ನಿರ್ದೇಶಕರಾಗಿ ಕೆ. ಜಗದೀಶ್ ಕಂದಿಕೆರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಬಿವಿ. ಮಂಜುನಾಥ್ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕ ಹೆಚ್.ಆರ್. ತಿಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಸುರೇಶ್ ಬಾಬು, ಶಿವಕುಮಾರ್ ಸೇರಿದಂತೆ ಮತ್ತಿತರರು ಶುಭ ಹಾರೈಸಿದರು.


