ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಶಾಸಕ ಬಸನಗೌಡ ಯತ್ನಾಳ್ ಸಿಎಂ ಹುದ್ದೆ ಹೇರುವ ಖರ್ಚು ವೆಚ್ಚದ ಬಗ್ಗೆ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗೋದಕ್ಕೆ 2-3 ಸಾವಿರ ಕೋಟಿ ವ್ಯವಸ್ಥೆ ಮಾಡಬೇಕಾಗುತ್ತದೆ. ಅಲ್ಲಿ ಕೊಡಬೇಕು ಮೇಲೆ ಕೊಡಬೇಕು. ಶಾಸಕರನ್ನ ಪ್ಯಾಕ್ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಈ ರೀತಿ ವ್ಯವಸ್ಥೆಯಿಂದ ಚುನಾವಣೆ ವ್ಯವಸ್ಥೆ ಬದಲಾಗಬೇಕು. ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಚರ್ಚೆ ಆಗುತ್ತಿದೆ.
ಒನ್ ನೇಷನ್ ಒನ್ ಎಲೆಕ್ಷನ್ ತಿಳಿಯಲ್ಲ ಅನ್ನುವುದು ತಪ್ಪು. ಒನ್ ನೇಷನ್ ಒನ್ ಎಲೆಕ್ಷನ್ ಅನ್ನೋದು ಜನರಿಗೂ ತಿಳಿಯುತ್ತೆ. ಪ್ರಜಾತಂತ್ರ ಏನಾದರೂ ಉಳಿದಿದೆ ಅಂದ್ರೆ ಅದು ಬಡವರಿಂದ. ಬುದ್ಧಿಜೀವಿಗಳಿಂದ ಪ್ರಜಾತಂತ್ರ ಉಳಿಯಲು ಸಾಧ್ಯವಿಲ್ಲ ಎಂದು ವಿಧಾನಸಭೆಯಲ್ಲಿ ಹೌಹಾರಿದ್ದಾರೆ.