ವಿಶೇಷ ವ್ಯಕ್ತಿಯಾಗಬೇಕಾದರೆ ಇತಿಹಾಸದ ಪ್ರಜ್ಞೆ ಇರಬೇಕು : ಶ್ರೀ ಬಸವಪ್ರಭು ಸ್ವಾಮಿಗಳು

1 Min Read

 

ಚಿತ್ರದುರ್ಗ, ಸೆ. 09: 12ನೇ ಶತಮಾನಕ್ಕೆ ದೊಡ್ಡ ಇತಿಹಾಸವಿದೆ. ಇಡೀ ವಿಶ್ವಕ್ಕೆ ಕಾಯಕ, ದಾಸೋಹ  ಸಮಾನತೆಯ ಪರಿಕಲ್ಪನೆಯ ಇತಿಹಾಸವನ್ನು ನೀಡಿದವರು ಬಸವಾದಿ ಪ್ರಮಥರು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.

ನಗರದ ಹೋಟೆಲ್ ರವಿಮಯೂರದಲ್ಲಿ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಇತಿಹಾಸ ಪ್ರಜ್ಞೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ವಿಶೇಷ ವ್ಯಕ್ತಿಯಾಗಬೇಕಾದರೆ ಇತಿಹಾಸದ ಪ್ರಜ್ಞೆ ಇರಬೇಕು. ಬಸವಣ್ಣನವರ ನೇತೃತ್ವದಲ್ಲಿ ವರ್ಗ, ವರ್ಣರಹಿತ ಸಮಾಜ ನಿರ್ಮಿಸಿದರು.

12ನೇ ಶತಮಾನದಲ್ಲಿ ಬೇಡುವವರು ಇರಲಿಲ್ಲ ಕಾರಣ ಎಲ್ಲರೂ ಕಾಯಕ ಜೀವಿಗಳಾಗಿದ್ದರು. ಬೇಡುವವರಿಲ್ಲದ ಸಮಾಜವನ್ನು ನಿರ್ಮಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಇದೊಂದು ಇತಿಹಾಸ. ವಚನಸಾಹಿತ್ಯ ಪ್ರಸ್ತುತ ದಿನಮಾನಗಳಲ್ಲಿ ವಿಶ್ವಕ್ಕೆ ಮಾದರಿ ಸಾಹಿತ್ಯವಾಗಿದೆ ಎಂದು ಹೇಳಿದರು.

ಬಿ. ವಿಶ್ವನಾಥ್ ಐತಿಹಾಸಿಕ ದೃಷ್ಟಿ ವಿಷಯ ಕುರಿತು ಮಾತನಾಡುತ್ತ, ಇತಿಹಾಸದ ಅರಿವು ಇರುವವರು ಇತಿಹಾಸ ಸೃಷ್ಟಿಸುತ್ತಾರೆ. ಚಿತ್ರದುರ್ಗ ಮುರುಘಾಮಠವನ್ನು ಐತಿಹಾಸಿಕ ಮಠ ಎಂದು ಕರೆಯುತ್ತೇವೆ. ಇತಿಹಾಸ ನಮ್ಮ ಸಂಸ್ಕøತಿಯನ್ನು ಬದಲಾಯಿಸುತ್ತದೆ. ಪ್ರತಿಯೊಂದುಕ್ಕು ಇತಿಹಾಸ ಇದೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸ ಇದೆ. ಗಾಂಧೀಜಿಯವರು ನಮ್ಮ ಇತಿಹಾಸದ ವ್ಯಕ್ತಿಯಾಗಿ ಕಾಣುತ್ತಾರೆ. ಭಾರತ ದೇಶ ಇನ್ನೂ ಉಳಿದುಕೊಂಡಿರುವುದು ನಮ್ಮ ಶ್ರೀಮಂತ ಪರಂಪರೆ ಕಾರಣ. ಹಾಗಾಗಿ ನಮ್ಮ ದೇಶ ಐತಿಹಾಸಿಕವಾಗಿ ಉಳಿದುಕೊಂಡಿದೆ ಎಂದರು.

ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಸಂಪದ್ಭರಿತವಾದ ಇತಿಹಾಸವಿರುವ ಭಾರತವನ್ನು ಒಂದು ಸಾವಿರ ವರ್ಷಗಳ ಕಾಲ ಪರಕೀಯರು ಆಳಿದ್ದಾರೆ. ಆದರೆ ನಮ್ಮ ಸಂಪ್ರದಾಯವನ್ನು ಭಾರತೀಯರು ಬಿಡಲಿಲ್ಲ. ಆ ಸಂಸ್ಕøತಿಯನ್ನು ಇಂದಿಗೂ ಸಹ ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮ ದಾಸೋಹಿಗಳಾದ ಪ್ರಸನ್ನಕುಮಾರ್, ಡಾ. ನಾಗಭೂಷಣ, ಶ್ರೀಮತಿ ತ್ರಿವೇಣಿ ಪ್ರಸನ್ನಕುಮಾರ್,
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಟಿ.ಪಿ. ಜ್ಞಾನಮೂರ್ತಿ ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *