ತಮಿಳು ನಾಡು ರಾಜಕೀಯದಲ್ಲಿ ಬೇನಾಮಿ ಆಸ್ತಿ ಸಂಪಾದನೆಯ ಸದ್ದು ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಡಿಎಂಕೆ ಪಕ್ಷದ ಶಾಸಕರು, ಸಚಿವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬೇನಾಮಿ ಆಸ್ತಿಯ ವಿರುದ್ದ ಟ್ರಂಕ್ ನಲ್ಲಿ ಕಡತಗಳನ್ನು ತಂದಿದ್ದಾರೆ. ಡಿಎಂಕೆ ಸರ್ಕಾರದಲ್ಲಿ 5,600 ಕೋಟಿಯ ಮೊತ್ತದ ಮೂರು ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.
ಇಂದು ಅಣ್ಣಾಮಲೈ ನೇತೃತ್ವದಲ್ಲಿ ನಿಯೋಗ ತಮಿಳುನಾಡಿನ ರಾಜ್ಯಪಾಲರ ಭೇಟಿ ಮಾಡಿದೆ. ರಾಜ್ಯಪಾಲರಾದ ಆರ್ ಎನ್ ರವಿ ಅವರಿಗೆ ದೂರು ನೀಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ದೊಡ್ಡ ಟ್ರಂಕ್ ಗಳಲ್ಲಿ ಎಳೆದು ತಂದಿದ್ದಾರೆ. ಈ ವೇಳೆ ರಾಜ್ಯಪಾಲರಿಗೆ ಮಾಹಿತಿ ನೀಡಿದ ಅಣ್ಣಾಮಲೈ, ಡಿಎಂಕೆ ಪಕ್ಷದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಶಾಸಕರು, ಸಂಸದರು, ಸಚಿವರು ಅವರ ಕುಟುಂಬಸ್ಥರು ಕೋಟಿ ಕೋಟಿ ಲೆಕ್ಕದಲ್ಲಿ ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ ಅವರು, ನಾವು ರಾಜ್ಯಪಾಲರಿಗೆ ಡಿಎಂಕೆ ಫೈಲ್ಸ್ ಪಾರ್ಟ್ 2 ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದಿದ್ದಾರೆ. ಇಂದು ಅಣ್ಣಾಮಲೈ ಅವರು ಇದೇ ಜುಲೈ 28ರಿಂದ 10 ತಿಂಗಳ ಕಾಲ ಸಿಂಹವಾಹನಂ ಹೆಸರಲ್ಲಿ ಬೃಹತ್ ಪಾದಯಾತ್ರೆ ಹೊರಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆಯೋ ನಡೆಯೋ ಈ ಪಾದಯಾತ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.